ಮಲದ ಮೆರವಣಿಗೆ
srinath.jpg

{ಜಗತ್ತಿನ ಹಲವೆಡೆ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು. ಒಂದೇ ಪಕ್ಷದ ಮುಖಂಡರು ಅಧ್ಯಕ್ಷತೆಯ ಸೀಟಿಗಾಗಿ ಹೋರಾಡುತ್ತಿರುವುದು ಅಮೇರಿಕದಲ್ಲಾದರೆ ಹಲವು ಪಕ್ಷದವರು ಮುಖ್ಯಮಂತ್ರಿ ಪದವಿಗಾಗಿ ಗುದ್ದಾಡುತ್ತಿರುವುದು ನಮ್ಮ ಕನ್ನಡ ನಾಡಿನಲ್ಲಿ. ಪ್ರಮುಖವಾದ ಮೂರು ಪಕ್ಷಗಳು ಸೆಣಸುತ್ತಿರುವ ಈ ರಾಜಕೀಯ ಯುದ್ದದಲ್ಲಿ ಮತದಾರನ ಮುಂದಿರುವ ಪ್ರಶ್ನೆ ’ಯಾರು ಹಿತವರು ಈ ಮೂವರೊಳಗೆ ?’ ಎಂದು. ಈ ಕವನ ಕರ್ನಾಟಕದಲ್ಲಿನ ರಾಜಕೀಯ ಕುರಿತು}


ಹೊರಟಿದೆ ನೋಡ ಮಲದ ಮೆರವಣಿಗೆ

ಮೈಯ ತೊಳೆವುದು ಗಂಗಾ ಜಲ
ತೊಳೆಯದದು ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಸುತ್ತಿಬಂದರು ತಿರುಮಲ
ಕಳಿಯಲಿಲ್ಲ ಪಾಪದ ಫಲ
ಹೊರಟಿದೆ ನೋಡ ಮಲದ ಮೆರವಣಿಗೆ

ಕುಡಿದು ಬೆಳೆದರೂ ಕಾವೇರಿ ಜಲ
ಕರಗಲಿಲ್ಲ ಮನದ ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಮನದ ತುಂಬ ಹಾಲಾಹಲ
ಮನವಾಗುವುದೆಂದೋ ನಿರ್ಮಲ
ಹೊರಟಿದೆ ನೋಡ ಮಲದ ಮೆರವಣಿಗೆ

ಬುಟ್ಟಿ ಹೊತ್ತು ನಿಂತ ಕೋಮಲ
ನೋಡಿ ಅಲ್ಲಿ ಅರಳಿದ ಕಮಲ
ತೋರುತ ಅಭಯ ಹಸ್ತ ಅಗಲ
ಹೊರಟಿದೆ ನೋಡ ಮಲದ ಮೆರವಣಿಗೆ

ಕುಡಿಸುತ ನೀರಾ ಏರಿಸಿ ಅಮಲ
ನೀಡುತ ವಸ್ತ್ರ ತೋರುತ ಹಣಬಲ
ಹೊರಟಿದೆ ನೋಡ ಮಲದ ಮೆರವಣಿಗೆ

ಸೀಟಿನಾಸೆಗೆ ಎಳೆಯುತ ಕಾಲ
ಹಿಡಿದರು ಗೆದ್ದೆತ್ತಿನ ಬಾಲ
ಹೊರಟಿದೆ ನೋಡ ಮಲದ ಮೆರವಣಿಗೆ

ಅರಳಲು ರಾಜ್ಯದಿ ಕೇಸರಿಯ ಕಮಲ
ತುಂಬುವುದೇ, ನೀರಿಲ್ಲದೇ ಒಣಗಿದಾ ನೆಲ
ಗೆದ್ದು ಬಂದರೆ ಬುಟ್ಟಿ ಹೊತ್ತ ಕೋಮಲ
ಕಾಣುವುದೇ ಹಸಿರು, ಉಳುವವನಾ ಹೊಲ
ಮರಳಲು ಹಸ್ತ, ತೋರುತ ಹಣಬಲ
ನೀಡುವುದೇ ಹಸಿವಿನ ಹೋರಾಟಕ್ಕೆ, ಬೆಂಬಲ

ಹೊರಟಿದೆ ನೋಡ ಮಲದ ಮೆರವಣಿಗೆ
ಅಟ್ಟುತ  ನಿರೀಕ್ಷೆಗಳನು ಸಾವಿನರಮನೆಗೆ

 

Syndicate

Syndicate content