- ಗುರು ಬಬ್ಬಿಗದ್ದೆ
ಬಾನ ಚಂದಿರನಲ್ಲಿ ನಗುತ ಸೂರ್ಯನ ಮನಸು
ಆಸೆಯಲಿ ಹೇಳಿತು ಪ್ರೀತಿ ಮಾಡುವ ಚಂದ್ರ
ಕೋಮಲ ಹೂವು ಸೂರ್ಯ ಕೆಂಡದ ಉಂಡೆ
ಸೌಮ್ಯಕೂ ಶಾಖಕೂ ಇಲ್ಲದು ದಂಡೆ ೧
ನಾನು ಗ್ರಹಗಳ ಹಿರಿಯ ಆಗು ಸತಿ
ಎನ್ನ ಮನೆಯ ಒಲವಿನಲಿ ಒಂದಾಗುವ
ಆಳುವ ಜಗವ ಕನಸ ನೀ ಕಾಣದಿರು
ನನಸಾಗದಿದ್ದರದು ನಿರಾಸೆಯೂ ಗತಿಯೂ ನನ್ನಯ ಗೆಳೆಯಾ ೨
ನನ್ನ ನಿನ್ನಯ ಮದುವೆ ಕೋಟಿ ತಾರೆಗಳ ನಡುವೆ
ಬಾರೋ ನೀ ಬಳಿಗೆ ಇಲ್ಲ ಮಳೆಯ ಪರಿವೆ
ನಿನ್ನ ಮಾತಿಗೆ ನಾನು ನಗಲೇ ಇಲ್ಲವೇ ಅಳಲೇ
ಮದುವೆಯ ಮಾತನ್ನೊಂದು ಬಿಡು ನೀ ಮರುಳೇ ೩
ನಂತರವೇ ಚಳಿಗಾಲ ಬೆಚ್ಚನೆ ಬಯಸುವ ಕಾಲ
ಕಾಲದ ಚಿಂತೆಯೇ ಇಲ್ಲ
ಅಮವಾಸ್ಯೆ ಶಾಪವೇ ಅಲ್ಲ
ಪೂರ್ಣಿಮೆಯ ಇರುಳಲಿ ಎನಗೆ ಪರಮ ಸುಖವು ೪
ಇದ್ದರೆ ಇಬ್ಬರಿಗೂ ಮುನಿಸು ನರಳುವುದು
ಭುವಿಯ ಕೂಸು ಇನ್ನಾದರೂ ಹಟವನು ಬಿಟ್ಟು ತಾಳಿಗೆ ಕೊರಳನ್ನಿಟ್ಟು
ಅಗೋ ಬಂತು ವಸಂತ ಕೋಗಿಲೆಗಳ ಸಂಗೀತ
ಸಂಕ್ರಮಣದ ಕಾಲದಲಿ ಮದುವೆ ಕಾಂತ ೫








