ಕೊರೆಯುವ ಚಳಿಗೆ ಜಾರಿದ ಹನಿಗಳು
ಗೋಪಿನಾಥ್ ರಾವ್

- ಗೋಪೀನಾಥ ರಾವ್

ಬೆಳಗಾತ ಎದ್ದು
ಮಾಡಿಕೊಟ್ಟೆ ಮಡದಿಗೆ
ಬಿಸಿಬಿಸಿ ಕಾಫಿ
ಮದುವೆಯಾಗಿನಿಂದ
ಇದುವರೆಗಿನ
ತಪ್ಪುಗಳೆಲ್ಲ ಮಾಫಿ...!

 

ನಸುಕಿನಲ್ಲೇ ಮಿಂದು
ಬರೆಯುತ್ತಿದ್ದಳು ರಂಗೋಲಿ
ಮುಸುಕಿನಲ್ಲೇ ಬಂದು
ಮೈಮೈ ತಾಗಿಸುವ ಖಯಾಲಿ
ಒಳಗೆ ಬಿಸಿ ಹೊರಗೆ ಚಳಿ
ಬರೇ ಹತ್ತು ಡಿಗ್ರಿ
ಕಂಡಾಳು ಆಚೆಮನೆ ವಾಚಾಳಿ
ಶೀ... ಎದ್ದು ಹೋಗ್ರಿ...!

 

ಮುನಿಸು ಆವರಿಸಿದ ಘಳಿಗೆ
ಮನೆಯಲ್ಲೇ ಜೈಲು
ಬಾರೇ ಎಂದರೂ ಇಲ್ಲ ಬಳಿಗೆ
ತುಟಿ ಕಡಿಯುವ ಚಳಿಗೆ
ಚಡಪಡಿಸಿದ ರೈಲು
ತಾನಾಗಿ ಬಂದಿತ್ತು ಹಳಿಗೆ..!

 

 

Syndicate

Syndicate content