ನಗು
ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ 

ನಕ್ಕು ಬಿಡು ಮನದೆನ್ನೆ
ನಕ್ಕು ಬಿಡು ಒಮ್ಮೆ
ನೀನು ನಕ್ಕಾಗ ಆಗುವುದು ಸರ್ವಾಂಗಗಳಲು ಹೆಮ್ಮೆ ೧


ನಗಲು ನಿನಗೇಕೆ ಬರ
ಇರಲು ನಗುವಿನಲಿ ಶಕ್ತಿ ಪ್ರಖರ
ಆ ನಿನ್ನ ನಗು ಬೆಂದ ಜೀವಕ್ಕೂ ತಂಪಿನ ಆಸರ ೨


ದು:ಖವನು ಮರೆಮಾಚಿ
ಹುಸಿನಗೆಯ ನಗದಿರು
ನಿನ್ನ ನಗುವಿನಲ್ಲೇಷ್ಟೋ ದು:ಖದಲಿ ಪಾಲಿಡು ೩


ನಕ್ಕು ನಗಿಸಲು ಹೋಗಿ
ಅಳುವುದ ಮರೆಯದಿರು
ಸಾಂತ್ವನದ ಚುಂಬನಕೆ ಸುಖ ದು:ಖ ಕಲ್ಪತರು ೪


ಒಂದೊಮ್ಮೆ ಅಳಲು ಹೋಗಿ ನಗಲು ಬಿಟ್ಟರೆ
ಜಗತ್ತು ನಿನಗಾಗಿ ಎಂದು ಅಳದು
ನಕ್ಕು ಬಿಡು ಮನದೆನ್ನೆ ನಕ್ಕು ಬಿಡು ಒಮ್ಮೆ ೫

Syndicate

Syndicate content