ಹೊಸ ಬರಹ ಸೇರಿಸಿ
ನೀವು ಹವ್ಯಾಸಿ ಬರಹಗಾರರೇ? ನೀವು ಕನ್ನಡದಲ್ಲಿ ನುರಿತ ಬರಹಗಾರರೇ?
ನೀವು ಪ್ರಸಿದ್ಧಿ ಪಡೆದ ಕನ್ನಡ ಬರಹಗಾರರೇ?
ಕನ್ನಡಧ್ವನಿ ತಮ್ಮೆಲ್ಲರನ್ನು ನಮ್ಮ ಜಾಲತಾಣದಲ್ಲಿ ಬರೆಯುವಂತೆ ವಿನಂತಿಸುತ್ತದೆ. ಸಾಹಿತ್ಯಾಸಕ್ತ ಹೊರನಾಡ ಕನ್ನಡಿಗರು ಹುಟ್ಟುಹಾಕಿದ ಈ ಜಾಲತಾಣದಲ್ಲಿ ಹೊಸಬರನ್ನು ಪ್ರೋತ್ಸಾಹಿಸುವುದು ಮತ್ತು ಒಳ್ಳೆಯ ಲೇಖಕರ ಬರವಣಿಗೆಗಳನ್ನು ಓದುಗರಿಗೆ ಸುಲಭದಲ್ಲಿ ದೊರಕಿಸುವುದು - ಇವು ನಮ್ಮ ಮುಖ್ಯ ಗುರಿಗಳು. ಬರಹಗಾರರಿಗೆ ತಮ್ಮ ಓದುಗರೊಂದಿಗೆ ನೇರ ಸಂಪರ್ಕದಲ್ಲಿರಲು ಕನ್ನಡಧ್ವನಿ ಅವಕಾಶವನ್ನೀಯುತ್ತದೆ. ಹೊಸ ಬರಹಗಾರರಿಗೆ ತಮ್ಮ ಬರಹಗಳನ್ನು ಓದುಗರ ಮುಂದಿಟ್ಟು ಪ್ರತಿಕ್ರಿಯೆ ಪಡೆಯಲು ಹಾಗೂ ಆ ಮೂಲಕ ತಮ್ಮನ್ನು ತಿದ್ದಿಕೊಳ್ಳಲು ಕನ್ನಡಧ್ವನಿ ಸೂಕ್ತವಾದ ವೇದಿಕೆ.
ತಮಗೆ ಸೂಕ್ತ ಅನ್ನಿಸಿದ ವಿಷಯಗಳ ಬಗೆಗೆ ವಸ್ತುನಿಷ್ಠವಾಗಿ "ಸಂಪಾದಕರ ಹಂಗಿಲ್ಲದೆ ಬರೆಯುವ ಅವಕಾಶ"ವನ್ನು ಕನ್ನಡಧ್ವನಿ ನಿಮಗೊದಗಿಸುತ್ತದೆ.
"ಹೊಸ ಬರಹ ಸೇರಿಸಿ"- ಈ ಕೊಂಡಿಯಲ್ಲೇ ನಿಮ್ಮ ಲೇಖನಗಳನ್ನು ಮುಂದಿನ ವಾರದ ಪ್ರಕಟಣೆಗಾಗಿ ಲೇಖನಗಳ ಕ್ಯೂನಲ್ಲಿ ಸೇರ್ಪಡೆಗೊಳಿಸಬಹುದು. ಈ ಸೌಲಭ್ಯ ಬಳಸಿಕೊಳ್ಳಲು ಲಾಗಿನ್ ಆಗಿ ಸದಸ್ಯರಾಗುವುದು ಅವಶ್ಯ. ನಿಮ್ಮ ಲೇಖನ ಪ್ರಕಟಗೊಂಡಾಗ ಹೇಗೆ ಓದುಗರಿಗೆ ಲಭ್ಯವಾಗುತ್ತದೆ ಎಂದು preview ನಲ್ಲಿ ನೋಡಿ ತಿಳಿದುಕೊಳ್ಳಬಹುದು. ತಿದ್ದುಪಡಿಗಳನ್ನೂ ಮಾಡಬಹುದು.
ಹೊಸ ಬರಹ ಸೇರಿಸಿ ಸೌಲಭ್ಯದ ಬಗೆಗೆ ನಿಮಗೇನಾದರೂ ಸಂದೇಹಗಳಿದ್ದರೆ ನಮ್ಮನ್ನು ಸಂಪರ್ಕಿಸಿದಲ್ಲಿ ಸೂಕ್ತ ಮಾರ್ಗದರ್ಶನ ನೀಡಲು ನಾವು ಸದಾ ಸಿದ್ಧರಾಗಿದ್ದೇವೆ.
ಬರಹ ಸೇರಿಸಲು ಒಳಗೆ ಪ್ರವೇಶಿಸಿ (ಲಾಗಿನ್).



