ಇಶಾದ್ರಿಯ ಚುಟುಕುಗಳು
irshad3.jpg

ಹಿಂಸೆ ಇಲ್ಲದ ಜಾಗ

ಅರಳಬೇಕು ಆನಂದದಲ್ಲಿ ಮೊಗ
ಸಂತೋಷದಲ್ಲಿ ಕುಣಿಯಬೇಕು ಈ ಜಗ
ಪರಿವರ್ತನೆಯಾದರೆ ಹಿಂಸೆಯ ಮನ
ಎಷ್ಟೊಂದು ಚೆಂದ, ವರ್ತಮಾನಗಳ ದಿನ

ಭಿಕ್ಷುಕರಿಗೆ

ಕೈ ಕಾಲು ಇರುವಾಗ ಗಟ್ಟಿ
ಏಕೆ ಬೇಕು ಇನ್ನೊಬ್ಬರ ರೊಟ್ಟಿ
ಹಂಗು ಬಿಟ್ಟು ಪಡುವುದಾದರೆ ಹೆಮ್ಮೆ
ಬೆವರು ಸುರಿಸಿ ನೋಡಿ ಒಮ್ಮೆ

ದುಬೈ ಬಾಡಿಗೆ

ಸುಂದರ ನಗರ ಸುಂದರ ಬದುಕು
ಆಶಿಸಿ ಬರುತ್ತಾರೆ ದುಬೈಗೆ
ದೂರದ ಬೆಟ್ಟ ನುಣ್ಣಗೆ ಎನ್ನುವುದು ಸತ್ಯ
ನೋಡಿದ ಕೂಡಲೇ ಈ ನಗರದ ಬಾಡಿಗೆ

ನಾಲ್ಕು

ನಾಲ್ಕು ಸಾಲುಗಳಲ್ಲಿ ಬರೆಯುವ ನಿಮ್ಮ ಕವನ
ಮನತಟ್ಟುವ ಪರಿಯ ಕಿರಿಯ ಕಥನ
ಒಂದು ವೇಳೆ ಗೊತ್ತಿದ್ದರೆ ತಾಯಿಗೆ ಹೀಗಾಗುತ್ತದೆಂದು ತನ್ನ ಸಂತಾನ
ನೀಡುತ್ತಿದ್ದಳೇ ಆ ಮಗುವಿಗೆ ಜನನ?

ಮಗುವೆಂದೂ ಬರುವುದು ಭೂಮಿಗೆ ಪರಿಶುದ್ಧ
ಹಿರಿಯರಿಂದ ಕಲಿವುದು ಸದ್ಬುದ್ಧಿ-ದುರಭ್ಯಾಸ
ತನ್ನ ಕಂದ ಕೊಲೆಗಾರನಾಗುವುದು ಯಾವ ತಾಯಿಯೂ ಸಹಿಸದ ಸಂಗತಿ
ಭಯೋತ್ಪಾಕನಾಗುವುದು ಸಂಗದಿಂದ, ಅರಿತುಕೊಳ್ಳಬೇಕು ನಮ್ಮ ಮಂದಿ

 

ಸಮಯೋಚಿತ

ಸಮಯೋಚಿತ ಚುಟುಕುಗಳು ಇಷ್ಟವಾದವು. ಮು೦ದಿನ ವಾರದ ಕ೦ತುಗಳ ಬಗ್ಗೆ ಕುತೂಹಲದಿ೦ದ ಕಾಯುವ೦ತೆ ಮಾಡುವ ನಿಮ್ಮ ಪ್ರಯತ್ನ ಶ್ಲಾಘನೀಯ.

ಮೃಣಾಲಿನಿ ಉದಯ ಕುಮಾರ್

ಶ್ರೀ

ಶ್ರೀ ಗೋಪಿನಾಥ ರಾಯರು ನಿಮ್ಮ ಬರಹ ಜಾಣ್ಮೆಯ ಬಗ್ಗೆ ಹೇಳಿದ್ದು ಅಕ್ಷರಶಃ ಸತ್ಯವಾಗಿದೆ. ಯಾವುದೇ ವಸ್ತುವನ್ನು ಕಂಡರೂ ನಾಲ್ಕು ಸಾಲುಗಳಲ್ಲಿ ಅದೆಷ್ಟು ಸುಂದರವಾಗಿ ನಿರೂಪಿಸಿದ್ದೀರಿ - ತಲೆಬಾಗುತ್ತಿರುವೆ ಶ್ರೀ ಇಶಾದ್ರಿಯವರೇ.

 

ತ.ವಿ.ಶ್ರೀನಿವಾಸ, ಮುಂಬಯಿ

Ishaadriyavare, nimma

Ishaadriyavare,

nimma chuTukugaLu chuTukaagi, chaalaakiniMda kUDiddu, chaitanyadiMda mUDi baruttide. ellarigU jeevana paaThavannU kalisalu sahaayavaagide. heegE idakkU hechchina reetiyalli muMduvariyali eMdu aashisuva,

kannaDadhvani Oduga baLaga,

Dr. Meena subbarao.

ಪ್ರೀತಿಯ

ಪ್ರೀತಿಯ ಇಶಾದ್ರಿಯವರೇ, ನಿಮ್ಮ ಚುಟುಕುಗಳು ತುಂಬಾ ಚೆನ್ನಾಗಿವೆ. ಇನ್ನೂ ಬರೆದು ಕಳಿಸಿರಿ.
ಕನ್ನಡವಾಣಿ ಓದು ಬಳಗದವರಿಗೆ ಶುಭಾಶಯಗಳು.

ಸತೀಶ ಅಂಬಿಗ,ಕುಮಟಾ, ಕರ್ನಾಟಕ

ಪ್ರೀತಿಯ

ಪ್ರೀತಿಯ ಇಶಾದ್ರಿಯವರಿಗೆ, ನಿಮ್ಮ ಚುಟುಕು ಸಾಹಿತ್ಯದಿಂದ ಸಮಾಜದಲ್ಲಿನ ಒರೆಕೊರೆಗಳನ್ನು ಕುಟುಕುತ್ತ
ಎಚ್ಚರಿಸುತ್ತಿದ್ದೀರ.
ಧನ್ಯವಾದಗಳು
ಚಂದ್ರ

Syndicate

Syndicate content