- ಕನ್ನಡದಲ್ಲಿ ಕಂಪ್ಯೂಟರ್ ವಿಜ್ಞಾನದ ಹೊಸ ಪುಸ್ತಕಗಳ ಬಿಡುಗಡೆ-
ಯುವ ವಿಜ್ಞಾನ ಬರಹಗಾರ ಹಾಗೂ ಸಾಫ್ಟ್ವೇರ್ ತಂತ್ರಜ್ಞ ಟಿ. ಜಿ.ಶ್ರೀನಿಧಿಯವರ ಹೊಸ ಪುಸ್ತಕಗಳು -'ವೆಬ್ ವಿಹಾರ' ಹಾಗೂ 'ಅವಕಾಶ ಅಪಾರ'- ಬರುವ ಜುಲೈ ೨೦ರ ಭಾನುವಾರ ಸಂಜೆ ೫ ಗಂಟೆಗೆ ಬೆಂಗಳೂರು ಬಸವನಗುಡಿಯ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ವರ್ಲ್ಡ್ ಕಲ್ಚರ್ನಲ್ಲಿ ಬಿಡುಗಡೆಯಾಗಲಿವೆ. - ಮನೆಯೊಳಗೊಂದು ಪುಟ್ಟ ತರಕಾರಿ ತೋಟ.-
-ಅರ್ಶದ್ ಹುಸೇನ್ ಎಂ.ಹೆಚ್
ಆಧುನಿಕತೆ ಹೆಚ್ಚಿನವರನ್ನು ನಗರದತ್ತ ಸೆಳೆಯುತ್ತಿದ್ದಂತೆ ನಗರದಲ್ಲಿ ಸ್ಥಳಾಭಾವವೂ ಸ್ವಾಭಾವಿಕ. ಅದರಲ್ಲೂ ಮಹಡಿಯಲ್ಲಿರುವವರಿಗೆ ತೋಟಗಾರಿಕೆ ಕನಸಿನ ಮಾತು.
- ಕಡೆಗೂ 378 ಕಿ.ಮೀ ದೂರವನ್ನು ಗಾಳಿಯಲ್ಲಿ ತೇಲುತ್ತ ಸಾಗಿ ಗುರಿ ಸಾಧಿಸಿದ ತಿಳಿಗೇಡಿ-
-ಅರ್ಶದ್ ಹುಸೇನ್ ಎಂ.ಹೆಚ್.
ಕಳೆದ ವಾರ ತಿಳಿಗೇಡಿಯೊಬ್ಬನ ಕುತೂಹಲಕರ ಸಾಹಸಗಾಥೆಯನ್ನು ವಿವರಿಸಿದ್ದೆವು. ನಿಗದಿತ ದಿನದಂದು ಆತ ಇಡಾಹೋ ನಗದರ ಹುಲ್ಲುಗಾವಲಿನಲ್ಲಿ ಸುಮಾರು 378 ಕಿ.ಮೀ ಗಾಳಿಯಲ್ಲಿ ತೇಲುತ್ತಾ ಸಾಗಿ ಬಂದಿಳಿದಿದ್ದಾನೆ. - ಬೆಂಗಳೂರು - ಬೆಳೆದು ಬಂದ ಹಾದಿ-
- ಸಂಗ್ರಹ : ಎಮ್.ಎಸ್.ರಾಮಚಂದ್ರ
ಕರ್ನಾಟಕದ ರಾಜದಾನಿಯಾದ ಬೆಂಗಳೂರು ,ಸುಮಾರು ೭೪೦ ಚದರ ಕಿಲೋಮೀಟರ್ ವಿಸ್ತಾರವಾಗಿ ,ಸುಮಾರು ೬೫ ಲಕ್ಷ ಜನಸಂಖ್ಯೆಯಿಂದ ಕೂಡಿ. ಭಾರತದ ಬೃಹತ್ ಪಟ್ಟಣಗಳಲ್ಲಿ ಒಂದಾಗಿ, ವಾಣಿಜ್ಯ, ಕೈಗಾರಿಕೆ ಮತ್ತು ಕಂಪ್ಯೂಟರ್ ಸಾಫ಼್ಟ್ ವೇರ್ ಕಂಪನಿಗಳ ಕೇಂದ್ರವಾಗಿ ಬೆಳೆದು ನಿಂತಿದೆ. ಈ ನಗರದ ಅಸ್ತಿತ್ವ , ದೊರೆತ ಪುರಾವೆಗಳಿಗೆ ಅನುಸಾರವಾಗಿ , ಸಾವಿರ ವರುಷಕ್ಕೂ ಹಿಂದಿನದೆಂದು ತಿಳಿದು ಬರುತ್ತದೆ.
- ದ್ವಿ-ತ್ರಿವಳಿ ಮಕ್ಕಳ ತಾಯಿ - ಮ್ಯಾರಥಾನ್ ಓಟಗಾರ್ತಿ-
-ಅರ್ಶದ್ ಹುಸೇನ್ ಎಂ. ಹೆಚ್.
ಇದೇನೋ ಹೊಸ ಪದ ಪ್ರಯೋಗವಾಗಿದೆಯೆಲ್ಲಾ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ವಾಸವಾಗಿರುವ ಜೆನ್ನಿ ಮಾಸ್ಖೆಯವರು ಜೂನ್ ೧೧-೨೦೦೭ ರಂದು (ಸುಮಾರು ಒಂದು ವರ್ಷದ ಹಿಂದೆ) ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಆರು ಮಕ್ಕಳನ್ನು ಏನೆನ್ನುವುದು? ಇಂಗ್ಲಿಷಿನಲ್ಲಾದರೆ ಸೆಕ್ಟುಪ್ಲೆಟ್ ಎಂಬ ಪದವಿದೆ. ಆದರೆ ಕನ್ನಡದಲ್ಲಿ?
- ನೂರು ವರ್ಷ ತುಂಬಿದ ಟೀ ಬ್ಯಾಗ್-
-ಅರ್ಶದ್ ಹುಸೇನ್ ಎಂ. ಹೆಚ್
ನಾವೆಲ್ಲ ಸಾಮಾನ್ಯವಾಗಿ ಬಳಸುತ್ತಿರುವ ಟೀಬ್ಯಾಗ್ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಸುಮಾರು ನೂರು ವರ್ಷ ಹಿಂದೆ ಟೀ ಮಾಡಲು ಸಮಯವಿಲ್ಲದಿದ್ದಾಗ ಕೂಡಲೇ ಟೀ ತಯಾರಿಸಿಕೊಂಡು ಕುಡಿಯಲು ಟೀ ಬ್ಯಾಗ್ ಗಳನ್ನು ತಯಾರಿಸಿದ್ದು ಕೇವಲ ಕಾಕತಾಳೀಯವಾಗಿ ಎಂದರೆ ನಂಬುತ್ತೀರಾ?
- ದುಬೈಯಲ್ಲಿ ಧ್ವನಿ ಕಲಾಸಂಭ್ರಮ: ಹಯವದನ ನಾಟಕ ಪ್ರದರ್ಶನ, ಸಾಧಕರಿಬ್ಬರಿಗೆ ಸನ್ಮಾನ-
ಧ್ವನಿ ಪ್ರತಿಷ್ಠಾನದ ಇಪ್ಪತ್ತಮೂರನೇ ವರ್ಷದ ಕಲಾ ಕಾರ್ಯಕ್ರಮವಾಗಿ 20.06.2008 ನೇ ಶುಕ್ರವಾರ ಸಂಜೆ 5.30 ಕ್ಕೆ ದುಬೈನ ಭಾರತೀಯ ದೂತಾವಾಸ ಸಭಾಗೃಹದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
- ರಾಸ್ ಅಲ್ ಖೈಮಾದ ನಿಗೂಢ ಅರಮನೆ -
-ಅರ್ಶದ್ ಹುಸೇನ್
ಇಪ್ಪತ್ತು ವರ್ಷಗಳಿಂದ ಖಾಲಿ ಬಿದ್ದಿರುವ ಅರಮನೆಯಲ್ಲಿ ಭೂತವಿದೆಯೇ?
ನಿಗೂಢವಾಗಿರುವ ಪ್ರಶ್ನೆಯು.ಎ.ಇ.ಯ ಒಂದು ಸಂಸ್ಥಾನವಾದ ರಾಸ್ ಅಲ್ ಖೈಮಾದಲ್ಲಿರುವ ಎ ದಿಯಾತ್ ಎಂಬಲ್ಲಿ ಹೋಗಿ ಅಲ್ ಕಾಸಿಮಿ ಅರಮನೆ ಎಲ್ಲಿ ಎಂದು ಯಾರನ್ನಾದರೂ ವಿಚಾರಿಸಿದರೆ ನೀವೇನೂ ಅದನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ, ಅದೇ ನಿಮ್ಮನ್ನು ಹುಡುಕಿಕೊಳ್ಳುತ್ತದೆ ಎಂದು ಸ್ಥಳೀಯರು ಉತ್ತರಿಸುತ್ತಾರೆ.
- ವೈದ್ಯರೂ ನಂಬುವ ಏಳು ಮಿಥ್ಯೆಗಳು-
ಕಟ್ಟುಕಥೆಗಳನ್ನು ನಂಬದಿರಿ ಎಂದು ಹೇಳುವ ವೈದ್ಯರೇ ನಂಬುವ ಏಳು ಪ್ರಮುಖ ಮಿಥ್ಯೆಗಳನ್ನು ಬ್ರಿಟಿಷ್ ಮೆಡಿಕಲ್ ಜರ್ನಲ್ ಪಟ್ಟಿಮಾಡಿದೆ.
ಮಿಥ್ಯೆ ೧) ನಾವು ನಮ್ಮ ಮೆದುಳಿನ ಸಾಮರ್ಥ್ಯದ ಶೇಖಡಾ ೧೦ನ್ನು ಮಾತ್ರ ಉಪಯೋಗಿಸುತ್ತೇವೆ: - ಜಗತ್ತಿನ ಅತ್ಯಂತ ದುಬಾರಿ ಆಧುನಿಕ ಕೈಗಡಿಯಾರ-
-ಅರ್ಶದ್ ಹುಸೇನ್ ಎಂ. ಹೆಚ್.
(ಈ ಲೇಖನದ ಸಾರಾಂಶ ಕನ್ನಡ ವಾರಪತ್ರಿಕೆ-'ತರಂಗ'ದ ೨೪ನೇ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕೈಗಡಿಯಾರ ನಮ್ಮೆಲ್ಲರ ಬಳಿ ಇದೆ. ಹಿಂದಿನವರಿಗೆ ಹೋಲಿಸಿದರೆ ನಮ್ಮ ಬಳಿ ಇರುವ ಕೈಗಡಿಯಾರಗಳು ಹೆಚ್ಚು ಕರಾರುವಾಕ್ಕಾಗಿಯೂ ಸುಂದರವಾಗಿಯೂ ಇದೆ. ಕೈಗಡಿಯಾರದ ವಿನ್ಯಾಸ, ಬಿಡಿಭಾಗ, ವೈಶಿಷ್ಟ್ಯತೆ, ತಯಾರಿಸುವ ಸಂಸ್ಥೆ ಇತ್ಯಾದಿಗಳನ್ನವಲಂಬಿಸಿ ನೂರು ರೂಪಾಯಿಯಿಂದ ಲಕ್ಷ ರೂಪಾಯಿ ಬೆಲೆಬಾಳುವ ಕೈಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಯಾವುವೂ ಇಂದು ಲಭ್ಯವಿರುವ ಅತ್ಯಂತ ದುಬಾರಿ ಕೈಗಡಿಯಾರದ ಒಂದು ಭಾಗಕ್ಕೂ ಸಮನಾಗುವುದಿಲ್ಲವೆಂದರೆ ನಂಬುತ್ತೀರಾ?
- ನನ್ನ ಶಾಲೆಗೆ ನೂರು ವರ್ಷ-
-ಇರ್ಶಾದ್ ಮೂಡಬಿದ್ರಿ, ದುಬೈ
ನಾನು ಮೂಡಬಿದ್ರಿಯ ಡಿ.ಜೆ (ದಿಗಂಬರ ಜೈನ್) ಒಂದು ವರುಷ ಮಾತ್ರ ಕಲಿತರೂ ಅಲ್ಲಿಯ ನೆನಪುಗಳು ಸದಾ ಹಸಿರು. ಆ ಶಾಲೆಗೆ ಇದೀಗ (೨೦೦೮) ನೂರು ವರ್ಷಗಳ ಸಂಭ್ರಮ. ಇವತ್ತು ಈ ಶಾಲೆ ತೊರೆದು ಇಪ್ಪತ್ತೈದು ವರ್ಷಗಳು ಕಳೆದರೂ ಆ ಬಾಲ್ಯ, ಆ ದಿನಗಳು ನೆನಪಾಗಿ ಕಾಡುತ್ತವೆ.
- ರಾಣಿಬೆನ್ನೂರ ಅರುಣ ಕುಮಾರ್ ಹಾಗೂ ಕಸ್ತೂರಿ ಮೂಲಿಮನಿಯವರಿಂದ ಹಾಸ್ಯ ಭಾಷಣ-
ಇಂದು ಸಂಜೆ ಐದರಿಂದ ಎಂಟು ಘಂಟೆಯವರೆಗೆ ಕನ್ನಡ ಕೂಟ ಯು.ಎ.ಇ. ಹಾಸ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
- ಅನಿವಾಸಿ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಂದು ನೋಟ:-
-ಜಯರಾಮ ಸೋಮಯಾಜಿ
ಪರದೇಶಗಳಿಗೆ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ಬಂದಿರುವವರ ಕನ್ನಡಿಗ ಮಕ್ಕಳ ವಿದ್ಯಾಭ್ಯಾಸದ ಮುಂದುವರಿಕೆ ಹೇಗೆ ಎಂಬುದು ಅವರವರ ಮಕ್ಕಳು ಇಲ್ಲಿನ ಶಾಲಾಭ್ಯಾಸ ಮುಗಿಯುವ ವೇಳೆಗೆ ಹೆತ್ತವರಿಗೆ ಬಿಸಿ ತಟ್ಟುತ್ತದೆ. ಮುಂದೇನು? ಎಲ್ಲಿಗೆ ಕಳುಹಿಸುವುದು?
- ಬರುವ ಶುಕ್ರವಾರ ದುಬೈ ಸಂಗೀತ ಸಂಜೆ-
- ಇರ್ಶಾದ್ ಮೂಡಬಿದ್ರಿ
ಇದೇ ಬರುವ ಎಪ್ರಿಲ್ ಹನ್ನೊಂದರಂದು ದುಬೈಯ ಅಲ್ ನಾಸರ್ ಲೀಶರ್ ಲ್ಯಾಂಡ್ ಐಸ್ ರಿಂಗ್ ನಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಇಲ್ಲಿ ತೂಗುದೀಪ ಶ್ರೀನಿವಾಸರ ಪುತ್ರ ನಟ ದರ್ಶನ್ ಅವರು ತನ್ನ ಜೊತೆಗೆ ಐವತ್ತಕ್ಕೂ ಹೆಚ್ಚಿನ ತಾರಾಬಳಗ ಹಾಗೂ ನೃತ್ಯ ತಂಡವನ್ನು ವೇದಿಕೆಗೆ ಕರೆ ತರಲಿದ್ದಾರೆ.
- ಪುಸ್ತಕ ವಿಮರ್ಶೆ: ಮುಹಮ್ಮದ್ ಕುಳಾಯಿ ಅವರ "ಇನ್ನಷ್ಟು ಕಥೆಗಳು"-
-ಇರ್ಶಾದ್ ಮೂಡಬಿದ್ರಿ
ಮುಹಮ್ಮದ್ ಕುಳಾಯಿ ನನ್ನ ಕಾಲೇಜು ದಿನಗಳ ಮೆಚ್ಚಿನ ಕಥೆಗಾರ. ನಾನು ಹೆಚ್ಚಾಗಿ ಅವರ ಕಥೆಗಳನ್ನು ಉದಯವಾಣಿ ಸಾಪ್ತಾಹಿಕ ಹಾಗೂ ಸನ್ಮಾರ್ಗದಲ್ಲಿ ಓದುತ್ತಿದ್ದೆ. ಅದಕ್ಕೀಗ ಪ್ರತಿಕ್ರಿಯೆಗಳನ್ನು ಬರೆಯುತ್ತಿದ್ದೇನೆ. - ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- -
- ಅರ್ಶದ್ ಹುಸೇನ್ ಎಂ.ಹೆಚ್.
(ನಿಕಟಪೂರ್ವ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ -ಭಾರತ ೨೦೨೦ರ ದೂರದೃಷ್ಟಿಯಲ್ಲಿ- ಕೃತಿಯಿಂದ ಆಯ್ದ ಭಾಗದ ಕನ್ನಡ ಅನುವಾದ)
ಸುಭದ್ರ ಭಾರತಕ್ಕೆ ಮೂರು ಸೂತ್ರಗಳು
ಸೂತ್ರ ೧: ಸುಮಾರು ಮೂರು ಸಾವಿರ ವರ್ಷಗಳಿಂದ ವಿಶ್ವದ ಎಲ್ಲೆಡೆಗಳಿಂದ ಅತಿಕ್ರಮಣಕಾರರು ಭಾರತಕ್ಕೆ ಧಾಳಿಯಿಟ್ಟು ನಮ್ಮ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ.
- ಉಪ್ಪಿನ ಮಹಾತ್ಮೆ-
-ಅರ್ಶದ್ ಹುಸೇನ್ ಎಂ ಹೆಚ್.
ಶೀರ್ಷಿಕೆ ನೋಡಿ ಕನ್ನಡ ನಟ ಉಪೇಂದ್ರ ಮಹಾತ್ಮೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ವಿಷಯ ನಮ್ಮ ಸಂಬಳದ್ದು. ಸಂಬಳ ಅಂದರೆ ಸ್ಯಾಲೇರಿಯಮ್ - ಅಂದರೆ ಅದೇ ವೇತನವೆಂದು ಮುಂಚೆ ಕೊಡುತ್ತಿದ್ದರಲ್ಲಾ, ಸಾಮಾನ್ಯ ಉಪ್ಪು.
- ಮೂತ್ರಿಯಲ್ಲಿ ನೊಣವೇ ಬೆಚ್ಚಿ ಬೀಳದಿರಿ, ಇದೊಂದು ಟ್ರಿಕ್-
- ಅರ್ಶದ್ ಹುಸೇನ್ ಎಂ.ಹೆಚ್.
ಭಾರತದಲ್ಲಿದ್ದಾಗ ನಾವು ಹೆಚ್ಚಾಗೆ ಸಿನೇಮಾ ಮಂದಿರದಲ್ಲಿ ಅಥವಾ ಸಾರ್ವಜನಿಕ ಮೂತ್ರಿಗಳಿಗೆ ಹೋಗುತ್ತಿದ್ದುದೇ ಕಡಿಮೆ. ಸ್ವಚ್ಛತೆಯೇ ಇದಕ್ಕೆ ಮುಖ್ಯ ಕಾರಣ. ಬಳಿಕ ಸುಲಭ್ ಶೌಚಾಲಯ ತಕ್ಕ ಮಟ್ಟಿಗೆ ಸ್ವಚ್ಛ ಹಾಗೂ ಉತ್ತಮ ಸೇವೆ ಒದಗಿಸುತ್ತಿದೆ. - ಒಂದಲ್ಲಾ ಒಂದೂರಿನಲ್ಲಿ-
(ಕನ್ನಡ ಸಾಹಿತ್ಯಕ ತ್ರೈಮಾಸಿಕ)ಸಾಹಿತಿ ಶ್ರೀ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಹೊಸ ಪ್ರಯೋಗ ಇದು. ಕನ್ನಡ ಓದುಗರಿಗೆ ಉತ್ತಮ ಕಥೆಗಳನ್ನು ಓದಲು ಒದಗಿಸಬೇಕೆಂಬ ಅವರ ಆಶಯ ಹಾಗೂ ಪ್ರಯತ್ನಗಳು ಮೇಳೈಸಿ ಈ ಪತ್ರಿಕೆ ಜನ್ಮ ತಾಳಿದೆ.
- ನಾಯಿ ಕೆದಕಿ ತೆಗೆದ ತೈಲ ಬಾವಿ!-
- ಅರ್ಶದ್ ಹುಸೇನ್ ಎಂ.ಹೆಚ್. ಶಾರ್ಜಾ
ನೆಲ ಕೆದಕಿ ಮೂಳೆ ಹುಡುಕುವುದು ನಾಯಿಯ ಜನ್ಮಸಿದ್ಧ ಹಕ್ಕು. ನೆಲದೊಳಕ್ಕೆ ಅವಿತಿರುವ ಮೂಳೆಗಳನ್ನು ಮಾತ್ರ ಅಗೆಯುತ್ತಿರುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಊಹೆ ತಪ್ಪು. ಅಮೇರಿಕಾದ ವರ್ಸೆಲ್ಲೀಸ್ ಎಂಬಲ್ಲಿ ಅದು ನೆಲ ಅಗೆದು ನೈಸರ್ಗಿಕ ಅನಿಲದ ಬಾವಿಯ ತುದಿಯನ್ನು ತನ್ನ ಮಾಲಿಕನಿಗೆ ತೋರಿಸಿಕೊಟ್ಟಿದೆ.
- ಮಯೂರ ಪ್ರಶಸ್ತಿ ೨೦೦೭- ಶ್ರೀ ಬಿ.ಜಿ.ಮೋಹನದಾಸ್ ಆಯ್ಕೆ-
- ಅರ್ಶದ್ ಹುಸೇನ್
೨೦೦೫ರಲ್ಲಿ ಕನ್ನಡಧ್ವನಿಯ ಲೇಖಕರಾದ ಶ್ರೀ ಇರ್ಶಾದ್ ಮೂಡಬಿದ್ರಿಯವರಿಗೆ ಸಿಕ್ಕಿದ್ದು ನೆನಪಿರಬೇಕಲ್ಲ, ಈ ವರ್ಷದ ಪ್ರತಿಷ್ಠಿತ ಪ್ರಶಸ್ತಿಗಾಗಿ ನಮ್ಮ ನೆಚ್ಚಿನ ಬೀಜಿಯವರು (ಆತ್ಮೀಯರಲ್ಲಿ ಬೀಜಿ ಎಂದೇ ಪ್ರಸಿದ್ಧರಾಗಿರುವ ಕನ್ನಡಿಗರಾದ ಶ್ರೀ ಬಿ.ಜಿ.ಮೋಹನದಾಸ್) ಆಯ್ಕೆಯಾಗಿದ್ದಾರೆ.
- ಶಾರ್ಜಾದ ಕನಾತ್ ಅಲ್ ಕಸ್ಬಾಕ್ಕೊಂದು ಭೇಟಿ.-
- ಅರ್ಶದ್ ಹುಸೇನ್ ಎಂ.ಹೆಚ್.
ಬೊಂಬಾಯಿಗೆ ಮರೈನ್ ಡ್ರೈವ್ ಹೇಗೋ ಹಾಗೆಯೇ ಶಾರ್ಜಾಕ್ಕೆ ಖಾಲಿದ್ ಲಗೂನ್. ಆಕಾಶದಿಂದ ನೋಡಿದರೆ ಸಮುದ್ರವನ್ನು ಎರೆಡು ಕೊಲ್ಲಿಗಳು ಅಕ್ಕಪಕ್ಕದಲ್ಲಿಯೇ ಭೂಮಿಯೊಳಕ್ಕೆ ಹೋಗಿರುವುದು ಶಾರ್ಜಾದ ತೀರದಲ್ಲಿ ಕಂಡುಬರುತ್ತದೆ. ಒಂದು ವೇಳೆ ಈ ಎರೆಡೂ ಕೊಲ್ಲಿಗಳ ನಡುವೆ ಒಂದು ಕಾಲುವೆ ತೋಡಿ ಸಂಪರ್ಕ ನೀಡಿದರೆ? ಇದನ್ನು ಕಲ್ಪನೆ ಮಾಡಿದವರ ಸಾಕಾರವೇ ಕನಾತ್ ಅಲ್ ಕಸ್ಬಾ.
- ನಮ್ಮ ಶೇಖರ ಶೆಟ್ಟಿಯವರಿಗೆ ಈ ಬಾರಿಯ ರಾಜ್ಯೋತ್ಸವದ ಪ್ರಶಸ್ತಿಯ ಗೌರವ-
ಭಾರತದ ಅತ್ಯಂತ ವೈವಿಧ್ಯಮಯ ಪ್ರವಾಸಿ ತಾಣ, ಬೇರೆಲ್ಲೂ ಕಂಡು ಬಾರದ ಸೌಂದರ್ಯವಿರುವುದು ಕರ್ನಾಟಕದಲ್ಲಿ. ಇಂತಹ ನಮ್ಮ ತಾಯಿನಾಡಿನ ಪ್ರಕೃತಿ ಸೌಂದರ್ಯ, ಶಿಲ್ಪ ವೈಭವ, ಕಡಲ ಕಿನಾರೆ, ವನ - ವನ್ಯ ಸಂಪತ್ತು, ಜಲಧಾರೆಗಳು, ಜನಪದ ಆಚರಣೆ, ಸಾಂಪ್ರದಾಯಿಕ ಉತ್ಸವ ಇಂತಹ ಸ್ವರ್ಗರೂಪಿ ವೈಭವದ ನಮ್ಮೂರನ್ನು ಬಿಟ್ಟು ಗಲ್ಫ್ ನಾಡಿಗೆ ಬರುವಾಗ ಬರಿ ಮರಳುಗಾಡು ಎಂಬ ಭಾವನೆ. ಉದ್ಯೋಗವನ್ನು ಹರಸಿ ಬರುವ ಲಕ್ಷೋಪಲಕ್ಷ ಜನರಿಗೆ ಬಂದ ನಂತರ ಜಗತ್ತಿನಾದ್ಯಂತ ವೈವಿಧ್ಯಮಯ ಉದ್ಯಮಗಳ ಬೃಹತ್ ಸಂಕೀರ್ಣಗಳು, ಸ್ವಚ್ಛವಾದ ದಾರಿಗಳು, ರಾತ್ರಿಯಾದರೆ ನೂತನ ವರ್ಣಮಯ ಲೋಕವನ್ನು ಸೃಷ್ಟಿ ಮಾಡುವ ದಾರಿ ದೀಪಗಳು, ಭೂಮಿಯ ಮೇಲೆ ಸ್ವರ್ಗಲೋಕದ ಸೃಷ್ಟಿ, ರಸ್ತೆ ಮೇಲೆ ಶಿಸ್ತು ಬದ್ಧವಾಗಿ ಚಲಿಸುವ ವಾಹನಗಳು, ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸು, ವಿವಿಧ ಆಕರ್ಷಕ ಹೂರಾಶಿ, ಉದ್ಯಾನವನಗಳು, ಸಮಯ ನಿಷ್ಠ ಶಿಸ್ತಿನ ಕೆಲಸದಲ್ಲಿ ತೊಡಗಿರುವವರ ಮುಖದರ್ಶನ ಪ್ರತಿನಿತ್ಯದ ನೋಟ. ಪ್ರತಿಯೊಬ್ಬರು ಸುರಕ್ಷಿತರು, ಕಳ್ಳರ ಭಯವಿಲ್ಲ, ದರೋಡೆ ಕೊಲೆಯ ಅಂಜಿಕೆಯಿಲ್ಲ, ಬಂದ್-ಹರತಾಳದ, ಕಲ್ಲುತೂರಾಟದ ದೃಶ್ಯ ಇಲ್ಲ, ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗುವುದಿಲ್ಲ. ಇಂತಹ ಈ ಗಲ್ಫ್ ನಾಡಿನಲ್ಲಿ ಭಾರತದ ವಿವಿಧ ಪ್ರದೇಶದವರಂತೆ ಕನ್ನಡಿಗರು ದಶಕಗಳಿಂದ ಗೌರವಯುತವಾಗಿ ಇಲ್ಲಿ ನೆಲೆಸಿದ್ದಾರೆ. ಈ ನಾಡಿನ ಶ್ರೀಮಂತಿಕೆಯಲ್ಲಿ ಭಾರತೀಯರ ಕೊಡುಗೆ ಅತ್ಯಮೂಲ್ಯವಾದದ್ದು. ಅದರಲ್ಲಿಯೂ ಕನ್ನಡಿಗರು ಬೃಹತ್ ಉದ್ಯಮ, ವ್ಯಾಪಾರ - ವಹಿವಾಟು ಮಾಡಿ ರಾಷ್ಟ್ರದ ವಿತ್ತ ಸಂಪತ್ತಿನಲ್ಲಿ ತಮ್ಮ ಪಾಲು ಸಿಂಹ ಪಾಲು ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಇಂತವರ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿ ಬರುವವರು ನಮ್ಮ ಶೇಖರ ಬಾಬು ಶೆಟ್ಟಿಯವರು. - ಮಾರುವಿಕೆಯ ತಂತ್ರ - ಸುಲಭ ಹಣ ಮಾಡುವ ಮಂತ್ರ-
- ತಳಕು ಶ್ರೀನಿವಾಸ, ಮುಂಬೈ
ವಸ್ತುಗಳನ್ನು ಮಾರಾಟ ಮಾಡಲು ಹಲವು ಬಗೆಯ ತಂತ್ರಗಳನ್ನು ಮಾಡುವುದನ್ನು ನಾವುಗಳು ಪ್ರತಿದಿನವೂ ಪ್ರತಿಹಂತದಲ್ಲೂ ಕಾಣಬರುತ್ತೇವೆ. ೩೦-೩೫ ವರ್ಷಗಳ ಹಿಂದೆ ರೇಡಿಯೋ, ಪತ್ರಿಕೆ ಅಥವಾ ಟಿವಿ ಮಾಧ್ಯಮದಲ್ಲಿ ವಸ್ತುವಿನ ಬಗ್ಗೆ ಜಾಹೀರಾತು ಬಂದರೆ ಸಾಕು, ಅದನ್ನೇ ಹೆಚ್ಚಿನ ಜನಗಳು ಕೊಳ್ಳುತ್ತಿದ್ದರು. ಅದಾದ ಹತ್ತು ವರ್ಷಗಳ ತರುವಾಯ ಪುರುಷರು ಸುಲಭವಾಗಿ ಜಾಹೀರಾತುಗಳ ತಂತ್ರಕ್ಕೆ ಮಣಿಯದ್ದನ್ನು ಕಂಡು, ಸ್ತ್ರೀಯರ ಮೂಲಕ ಜಾಹೀರಾತು ಮಾಡುವುದು, ಮನೆ ಮನೆಗಳಿಗೆ ಹೋಗಿ ವಸ್ತುಗಳ ಬಗ್ಗೆ ತಿಳಿಸಿ ಕೊಳ್ಳುವಿಕೆಗೆ ಒತ್ತಾಯಿಸುವುದು ಕಂಡುಬಂದಿತು. ಈಗೊಂದು ಐದಾರು ವರುಷಗಳಿಂದ ಮಕ್ಕಳನ್ನು ಪುಸಲಾಯಿಸಿ ವಸ್ತುಗಳ ಮಾರಾಟದ ಬಗ್ಗೆ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಇದೇನು ಹೊಸ ವಿಷಯವೇನಲ್ಲ. ಬಹಳ ಹಿಂದಿನಿಂದಲೂ ಇದ್ದದ್ದೇ. ಈಗೀಗ ನಾನು ಕಾಣುತ್ತಿರುವ ಒಂದು ವಿಧವನ್ನು ಬರಹ ರೂಪಕ್ಕೆ ಇಳಿಸುತ್ತಿರುವೆನಷ್ಟೆ. ಇದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು.



