- ಹೇಗೆ ಬರಲಿ...-
- ಗುರು ಬಬ್ಬಿಗದ್ದೆ
ಮಾವ ನಿನ್ನ ಮನೆಗೆ, ಅಳಿಯನಾಗಿ ಬರಲೇ
ಮಗನಾಗಿ ಬರಲೇ, ಬೆಳಕಾಗಿ ಬರಲೇ
ನಿನ್ನ ಮಗಳ ಮೇಲೆ ಒಲವಾಗಿ ಬರಲೇ
ನದಿಯಾಗಿ ಬರಲೇ, ಪ್ರೀತಿ ಅಲೆಯನ್ನು ತರಲೇ ೧
- ಊರ್ಧ್ವಮುಖಿ-
-ಮಹೇಶ್
ಊರ್ಧ್ವಮುಖಿ
ಭುವಿಯನ್ನೂ ಬಾನನ್ನೂ
ಬೆಸೆಯುವಂತೆ
ಬಯಲಲೊಂದು
ಒಂಟಿ ಮರ. - ಮೌನ ಪ್ರಾರ್ಥನೆ..- - ಗುರು ಬಬ್ಬಿಗದ್ದೆ
ನನ್ನ ಜೀವನದಿ ಬೆಳಕಾಗಿ ನೀ ಬಂದೆ
ನಿನ್ನ ಕಾಣದೆಯೆ ನಾ ನೋವನುಂಡೆ
ನಿನ್ನ ಕಾಲ್ಗೆರಗುತಲಿ ನಾ ಬಾಗಿ ನಿಂದೆ
ಸಾಗಿಸು ಎನ್ನ ಬಾಳ ನೌಕೆಯನು ತಂದೆ ೧ - ಸ್ವಾತಂತ್ರ್ಯೋತ್ಸವ-
-ದಿವ್ಯಾ ರಾವ್
ಸ್ವಾತಂತ್ರ್ಯೋತ್ಸವದ ಸಡಗರ ಸಂಭ್ರಮ
ತುಂಬಿದೆ ಭಾರತೀಯರ ಮನೆ, ಮನ
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ
ಮೊಳಗುತಿದೆ ದೇಶಭಕ್ತಿಯ ಕಹಳೆ
ಸ್ಮರಿಸೋಣ ನಮ್ಮ ಪೂರ್ವಿಕರ ತ್ಯಾಗ ಬಲಿದಾನ
ಸಲ್ಲಿಸುತ ವಿನಯಪೂರ್ವಕ ನಮನ - ಕನ್ನಡದ ಕೂಸು!!-
- ಉಮಾ ಭಾರದ್ವಾಜ್, ಕ್ಯಾಲಿಫೋರ್ನಿಯಾ
ತಾಯಿ ಭಾರತಿಯ ಮಡಿಲಿನಲಿ,
ತುಂಬು ಹೃದಯದ ಮಮತೆಯಲಿ,
ಕುಣಿದು ಕುಪ್ಪಳಿಸುತ ಸಂಭ್ರಮದಲಿ,
ಕವಿತೆಯ ಹಾಡಿ ,ಕೋಗಿಲೆ ಕಂಠದಲಿ.
ಕನ್ನಡದ ಕೂಸೆಂದು ಹೆಮ್ಮೆಯಲಿ.. - ಸ್ವಾತಂತ್ರ್ಯ ಎಂದಿತ್ತು ಎಂದಿದೆ?- -ತ.ವಿ. ಶ್ರೀನಿವಾಸ್
ಹಿಂದೊಬ್ಬನಿದ್ದ ಚಕ್ರವರ್ತಿ - ನೂರಾರು ಸಾಮಂತ ರಾಜರುಗಳು
ಇಂದಿಹರು ನೂರಾರು ಚಕ್ರವರ್ತಿಗಳು - ಸಹಸ್ರಾರು ಸಾಮಂತರು
ಇವ ಆಳಿದರೇನು ಅವ ಆಳಿದರೇನು
ಅಳುವುದು ನಮ್ಮದೇ ಕರ್ಮ - ಭ್ರಮಾಲೋಕದಲ್ಲೊಂದು ನಿಜ ಸ್ಪಟಿಕ-
-ಗಿರೀಶ್ ಕೆ.ಎಸ್, ಶಾರ್ಜಾ
ಭ್ರಮಾಲೋಕದ ಕಲ್ಪನೆಯ ಸುತ್ತ
ನಾ ಕಂಡಿದ್ದೆ,ಎಣಿಸಿದ್ದೆ ಜೀವನದ ಗತ್ತ
ಹುಚ್ಚು ಪ್ರೀತಿಯ ಹೊಳೆಯಲಿ ಕಳೆದುಹೋಗಿದ್ದೆ
ಜಗವೇನೆಂದು ಅರಿಯದೇ
ಬದಲಿಸದೇ ಮಗ್ಗಲ ಹಾಗೇ - ಮೋಹಿನಿ..... -
- ಗುರು ಬಬ್ಬಿಗದ್ದೆ
ಕಾಡುತಿರುವೆ ಕಾಡಬೇಡ,
ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ
ನನ್ನ ಬಾಳ ಚಾಂದಿನಿ ೧ - ಹಾಡಿದನು ಕವಿಯು-
--ಅರುಣ್ ಕುಮಾರ್ ಹೆಚ್ ಎಸ್.
ನಲಿವ ಮುಗಿಲು ನನ್ನಿ ಮನವು
ನಿನ್ನೊಲವ ಬಾಂದಳದಲ್ಲಿ
ನಗುವ ಹೂವು ನಿನ್ನಿ ಒಲವು
ನನ್ನ ಮನದಂಗಳದಲ್ಲಿ - ನನ್ನ ನೆಗಡಿ-
-ಗೋಪೀನಾಥ ರಾವ್
ಅಡಿಗಡಿಗೆ ಗಡಿಗೆ ನೀರು
ಹೊತ್ತು ಬರುವ ಗಂಗೆ
ಕೆಂಪಾದ ಮೂಗು
ತಿಳಿಸುವ ಆಗು ಹೋಗು.. - ಹೀಗೊಂದು ಆಲಾಪ-
--ಗಿರೀಶ ಕೆ ಎಸ್, ಶಾರ್ಜಾ, ಯುಎಇ
ನನ್ನ ನೀ ಅರಿತೆಯೆಷ್ಟೋ... ನಿನ್ನ ನಾನರಿತೆನೆಷ್ಟೋ?
ನಾವು ಅರಿತಷ್ಟು, ಬೆರೆತಷ್ಟು, ಬೆರೆತು ಬೆಂದಷ್ಟು
ಬೆರೆತು ಮನ ಬೆತ್ತಲಾದಷ್ಟು, ಕಲೆತಷ್ಟು
ಅನಿಸಿತ್ತು ನನಗೆ, ಇದು ನಿರಂತರ....ನಿರಂತರ - ರಂಗಿನ ಚಿಟ್ಟೆ-
-
ಮಾ.ಕೃ.ಮಂಜು
ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ
-
- ಆಸೆ ..............................-
-ರಂಜಿತಾ ಹೆಗಡೆ
ಇನಿಯಾ , ...
ನೀ ಬರುವ ದಾರಿಯಲಿ
ಹೂಮಳೆಯ ಚೆಲ್ಲಿ ,
ಮುತ್ತಿನ ರತ್ನಗಂಬಳಿ
ಹಾಕುವ ಬಯಕೆ ....! - ಎದೆಯಾಳದ ಬೆಂಕಿ !-
-ಶ್ರೀನಾಥ್ ಭಲ್ಲೆ
ಹೊತ್ತಿ ಉರಿದಿಹೆ ನೋಡ ಎದೆಯಾಳದ ಬೆಂಕಿ
ನೆರೆಹೊರೆಯರಲ್ಲಿ ಭಿನ್ನಮತದ ವಿಷ್ಯ
ಕಾದಾಡಲು ಸಿದ್ದವಿದೆ ಜಾರ್ಜಿಯಾ-ರಷ್ಯಾ
- ತೊಟ್ಟಿಲ ಕಂದ ಬಾಯ್ಬಿಟ್ಟಾಗ-
--ಶ್ರೀನಾಥ್ ಭಲ್ಲೆ
ಜಗತ್ತಿನ ಎಲ್ಲ ಕಡೆ ಟೆನ್ಶನ್ನೋ, ಟೆನ್ಶನ್ನು. ಬೆಳಗಿನಿಂದ ರಾತ್ರಿಯವರೆಗೂ ಟೆನ್ಶನ್ ! ರಾತ್ರಿ ಮಲಗ್ತೀವೋ ಇಲ್ವೋ ಟೆನ್ಶನ್ ! ಮಲಗಿದ ಮೇಲೆ ಬೆಳಿಗ್ಗೆ ಏಳುತ್ತೀವೋ ಇಲ್ವೋ ಅನ್ನೋ ಟೆನ್ಶನ್ ! ಟೆನ್ಶನ್ ಬಗ್ಗೆ ಬರೀತಾ ಹೋದರೆ ಕೊನೆಯೇ ಇಲ್ಲ.
- ನೆನಪುಗಳು-
-ಅರುಣ್ ಕುಮಾರ್ ಹೆಚ್ ಎಸ್.
೧
ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ. - ಸುಮ್ಮನಿದ್ದೆವು ನಾವು...!-
-ಗೋಪೀನಾಥ ರಾವ್
ನಮ್ಮ ನೆರೆಮನೆಯಲ್ಲಿ ಸರಕಾರಿ ಅಧಿಕಾರಿ
ಅಳತೆ ತೂಕದ್ದಲ್ಲ ಮಾತೂ ಅಧಿಕಾರಿ...!
ಅವರ ಮಗಳ ನಾಯಿ ಬೊಗಳು
ಹಗಲು ರಾತ್ರಿ ಶಬ್ದ ಸಂತೆಗಳು
ನೆಮ್ಮದಿಯ ನಿದ್ದೆ ಇಲ್ಲದೆ ತಲೆ ನೋವು
ನೆರೆಮನೆ ತಾನೇ.. ಸುಮ್ಮನಿದ್ದೆವು ನಾವು - ಅರಳುತಿದೆ ಮಲ್ಲಿಗೆಯು-
-ಅರುಣ್ ಕುಮಾರ್ ಹೆಚ್ ಎಸ್.
ನಿನ್ನ ಮುಗುಳುನಗೆಯಲ್ಲಿ
ಹರಡುತಿದೆ ಸ೦ತಸವು
ಸುಳಿಗಾಳಿಯಲ್ಲಿ
ನಿನ್ನೊಲವು ಸವಿಜೇನು - ರ೦ಗವಲ್ಲಿ-
- ಅರುಣ್ ಕುಮಾರ್ ಹೆಚ್ ಎಸ್.
ನನ್ನ ಮನದ೦ಗಳದಲ್ಲಿ ನಗುತಿಹುದು ರ೦ಗವಲ್ಲಿ
ಮೂಡಿಸಿದ ಜಾಣೆ ಎಲ್ಲಿಹಳೊ ಕಾಣೆ.
ತೆ೦ಗು ಗರಿಗಳ ನಡುವೆ ತು೦ಬು ಚ೦ದಿರನ೦ತೆ - " ಬದುಕು "-
- ರಂಜೀತಾ ಹೆಗಡೆ
ಮನಸನರಿಯದ ಮೌನ
ಮೌನವರಿಯದ ಮಾತು
ಆಸೆ ತಿಳಿಯದ ಮನಸು
ನನಸೇ ಆಗದ ಕನಸುಗಳು
ಈ
ಎಲ್ಲ ಭಾವಗಳು ಒಮ್ಮೆಲೇ
ಕಣ್ಣಲ್ಲಿ ನೀರಾಗಿ ಹರಿದಾಗ ,.....
ತಿಳಿದದ್ದು ನಾ ಇನ್ನೂ
ಬದುಕಿರುವೆನೆಂದು !!
- ಪಟ್ಟಾಭಿಷೇಕ-
- ನಳಿನಿ ಸೋಮಯಾಜಿ
ಆರು ಜನ ಪಕ್ಷೇತರನ್ನು ಸೇರಿಸಿ
ಬಹುಮತ ಬಂದಿರುವ ಸಾಧ್ಯತೆ ತೋರಿಸಿ
ತನ್ನೊಡನೆ ಇಪ್ಪತ್ತೊಂಬತ್ತು ಮಂದಿ ಕೂಡಿಸಿ
ಲಕ್ಷಾಂತರ ಜನರನ್ನ ಪ್ರತ್ಯಕ್ಷ ವಾಗಿರಿಸಿ
ಕಂಡ ಕಂಡ ದೇವರಿಗೆಲ್ಲ ಪೂಜೆ ಸಲ್ಲಿಸಿ
ಭುಗಿಲೆದ್ದವರನ್ನು ತಣ್ಣಗಾಗಿಸಿ - ಮೋಹಿನಿ-
- ಗುರು ಬಬ್ಬಿಗದ್ದೆ
ಕಾಡುತಿರುವೆ ಕಾಡಬೇಡ, ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ ೧ - ಹುಳುಕು ತರಕಾರಿ-
-ಶ್ರೀನಾಥ್ ಭಲ್ಲೆ
ಅಕ್ಕಾ ಅಕ್ಕಾ
ಬುಟ್ಟಿಯ ಹಿಡಿದು
ಹೊರಟೆ ನೀನೆಲ್ಲಿಗೆ ?
ಅಡುಗೆ ಮಾಡಲು
ತರಕಾರಿ ತರಲೆಂದು
ಹೊರಟೆ ಮಾರ್ಕೆಟ್ಟಿಗೆ
- ನಾಲ್ಕು ಚುಟುಕುಗಳು-
.....ನಳಿನಿ ಸೋಮಯಾಜಿ
ಭಯೋತ್ಪಾದನೆ
ಎಲ್ಲಿ ನೋಡಿದರೂ ಹೊಡೆದಾಟ
ಎಲ್ಲೆಂದರಲ್ಲಿ ಬಾಂಬುಗಳ ಸ್ಪೋಟ
ಸಾರ್ವಜನಿಕರಿರುವ ಸ್ಥಳವೇ ಇವರ ಗುರಿ
ಸಾಮಾನ್ಯರ ಸಾವುನೋವೇ ಭಯೋತ್ಪಾದನೆಯ ಪರಿ - ಮೌನ ಪ್ರಾರ್ಥನೆ..-
ಮೌನ ಪ್ರಾರ್ಥನೆ..
- ಗುರು ಬಬ್ಬಿಗದ್ದೆನನ್ನ ಜೀವನದಿ ಬೆಳಕಾಗಿ ನೀ ಬಂದೆ
ನಿನ್ನ ಕಾಣದೆಯೆ ನಾ ನೋವನುಂಡೆ
ನಿನ್ನ ಕಾಲ್ಗೆರಗುತಲಿ ನಾ ಬಾಗಿ ನಿಂದೆ - ನಾನು..............-
ನಾನು...
-ಗುರು ಬಬ್ಬಿಗದ್ದೆನಾನು ಎಂಬ ನನ್ನ ಒಳಗೆ ನಾನೇ ತುಂಬಿರುವೆ
ನನ್ನಾಸೆ ನನ್ನೆದೆಯ ನನ್ನೊಳಗೆ ಬೆರೆತಿರುವೆ ೧ - ಚುಟುಕುಗಳು-
-ನಳಿನಿ ಸೋಮಯಾಜಿಕನ್ನಡ ಕೌಸ್ತುಭ
ಝೀ ಟಿವಿ ರೂಪಿಸಿತ್ತು ಕನ್ನಡ ಕೌಸ್ತುಭ ಕಾರ್ಯಕ್ರಮವನ್ನು
ಕೂಡಿಸಿ ತಂದಿತ್ತು ಕನ್ನಡ ಸಿನೆಮಾ-ಕಿರುತೆರೆ ನಟ ನಟಿಯರನ್ನು
ಕೈ ಜೋಡಿಸಿ ಕರೆದಿತ್ತು ದುಬೈ ಕರ್ನಾಟಕ ಸಂಘ ಇವರೆಲ್ಲರನ್ನು
ಕಲಾವಿದರ ಹಾಡು ನರ್ತನ ಮನ ರಂಜಿಸಿತ್ತು ನೆರೆದಿದ್ದ ರಸಿಕರನ್ನು - ವಾಸ್ತವತೆ..... -
-ಗುರು ಬಬ್ಬಿಗದ್ದೆ
ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು ೧ - ಎನ್ನ ಮನ್ನಿಸು ತಾಯೇ-
-ಶ್ರೀನಾಥ್ ಭಲ್ಲೆ
ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.
- ಷೋಡಷಿಯು ಅವಳು....-
-ಗುರು ಬಬ್ಬಿಗದ್ದೆ
ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ ೧ - ನಾಲ್ಕು ಚುಟುಕಗಳಲ್ಲಿ ವಾಸ್ತವ ಚಿತ್ರಣ-
-ಶ್ರೀಮತಿ ನಳಿನಿ ಸೋಮಯಾಜಿ, ದುಬೈ
ಚುನಾವಣಾ ಘೋಷಣೆ
ಕೇಳಿರಿ ನಮ್ಮೂರ ಚುನಾವಣಾ ಘೋಷಣೆ
ಎಲ್ಲ ಪಕ್ಷಗಳು ಸಾರುತ್ತಿವೆ ಬಡವರ ಸಂರಕ್ಷಣೆ
ನಾಯಕರನ್ನು ನಂಬಿ ಆಗದಿರಿ ಶೋಷಣೆ
ಇವರಾಡುವ ಮಾತಿಗೆ ಸಿಗದು ವಿಶ್ಲೇಷಣೆ - ಕೆಲವು ಚುಟುಕಗಳು-
- ಗುರು ಬಬ್ಬಿಗದ್ದೆ
ತದ್ರೂಪಿ ಸೃಷ್ಟಿ
ಎಂಥ ವಿಸ್ಮಯವಯ್ಯ ನಿನ್ನಯಾ ಸೃಷ್ಟಿ
ನಿರ್ಮಿಸಿದ ವಿಜ್ಞಾನಿ ತದ್ರೂಪಿ ಸೃಷ್ಟಿ - ಕಿನ್ನರಿ ನುಡಿ - ಚುಟುಕುಗಳು-
- ನಳಿನಿ ಸೋಮಯಾಜಿ
ಕಿನ್ನರಿ
ಮುದ್ದು ಮುಖದ ಕಿನ್ನರಿ
ನಕ್ಕರೆ ಇವಳು ಸುಂದರಿ - ವಿಧಿ-
-ಗುರು ಬಬ್ಬಿಗದ್ದೆ
ವಿಧಿಯ ಆಟವನ್ನು ಬಲ್ಲವರಾರು, ಅದು ತನಗೆ ಇಷ್ಟ ಬಂದಂತೆ ವರ್ತಿಸುತ್ತದೆ. ಅದರ ಮುಂದೆ ನಾವು ಕುಬ್ಜರು. ಅದು ಕೆಲವೊಮ್ಮೆ ಪ್ರೀತಿಯ ಅಗಾಧತೆಯ ಸುಂದರಿ ಆದರೆ ಮರುಕ್ಷಣವೇ ಜೀವವನ್ನೇ ನುಂಗುವ ಮಾಯೆಯೂ ಹೌದು. - ನೆನಪುಗಳು ಕತೆಯ ಹೇಳುತಿವೆ?!! -
- ಸುರಬಿ
ಕಳೆದ ಹದಿನೆ೦ಟು ದಶಕದ
ಕತೆಯ ಹೇಳುತಿವೆ ಇಲ್ಲಿ
ಶತಕದಲಿ ಪಡೆಯಾಡಿದ
ವಿ೦ಶತಿ ತಲವಾರಿನ ಮೊನೆಯಲ್ಲಿ
ಝಲ್ಲನೆ ರಕ್ತ ಕಾರಿಸಿದ
ಕತೆಯ ಹೇಳುತಿವೆ ನೆರಳುಗಳು ಇಲ್ಲಿ ೧ - ನಿಮಗಾಗಿ-
-ಗುರು ಬಬ್ಬಿಗದ್ದೆ
ಕಾಡುತಿದೆ ನೆನಪುಗಳು, ಎದೆಯಾಂತರಾಳದಲಿ
ಹಾರೈಕೆ ಮನದಲಿ, ನಿಮಗೆ ಒಳಿತಾಗಲಿ ೧ - ಮೌನ ರೋದನ....... -
- ಗುರು ಬಬ್ಬಿಗದ್ದೆ
ಯಾಕವ್ವ ನನ್ನ ಹಡದಿ
ಬೆಳೆಸಿದೀ ಯಾಕ ಅಹಂಕಾರದಿ
ಇಲ್ಲದ ಆಸೆಗೆ ನೀರೆರೆಯುತಲಿ
ಕನಸಿನ ಲೋಕವ ದೂರ ಮಾಡಿದಿ ೧ - ಕೊನೆ...-
- ಗೋಪೀನಾಥ ರಾವ್
ದೀಪದ ಸುತ್ತ ಸಂಭ್ರಮದಿ
ಗೊತ್ತು ಗುರಿಯಿಲ್ಲದೆ ಸುತ್ತುಹಾಕಿ ಹಾತೆ
ಮತ್ತೆ ದೀಪದ ಜ್ವಾಲೆಗೆ
ಅಲ್ಲೆ ಹೊತ್ತಿ ಉರಿದು
ವಿರಮಿಸುವ ಹಾಗೆ - ಓ ಗೆಳೆಯಾ...-
- ಡಾ: ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೊರ್ನಿಯಾ.ಓ!!! ಗೆಳೆಯ, ನೀ ಎಲ್ಲಿರುವೆ?
ನಿನ್ನ ಕಾಣುವೆನೆಂದು ಈ ದಿನ
ನುಡಿಯಿತೆನ್ನ ಈ ಮನ - ಓ, ಮನಸೇ...-
ಡಾ. ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೋರ್ನಿಯಾ.ನೀನಿರುವುದು ಕಣ ಕಣಗಳಲಿ,
ಕಾಣದಿರುವುದು ಕಣ್ಣು ಕಣ್ಣುಗಳಲಿ,
ಕರೆದು ಜಯಿಸುವರುಂಟು ನಿನ್ನ,
ಕರೆಯದೇ-ಕೇಳದೇ ನೀ
ಬರುವೆ, ಗೆಲುವಿನ-ಒಲವಿನ ಒಡನಾಟಕೆ. - ನನ್ನ ಅಂತರಂಗ-
- ಗುರು ಬಬ್ಬಿಗದ್ದೆ
ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. - ಬೆವರು - ಟಿಪ್ಸ್ -
- ಅರ್ಶದ್ ಹುಸೇನ್ ಎಂ.ಹೆಚ್
ಭಗಭಗಿಸುವ ಸೆಖೆಯಲ್ಲಿ
ಜರಜರನೆ ಹಿಟ್ಟುಕಡೆದು
ಧಗಧಗಿಸುವ ಬೆಂಕಿಯೆದುರು
ಚೊಂಯ್ಯಚೊಂಯನೆ ದೋಸೆ ಹುಯ್ದು - ಪಕ್ಷಾಂತರ-
- ಶ್ರೀನಾಥ್ ಭಲ್ಲೆ
ನಲ್ಲೆ
ನಿನ್ನಲ್ಲಿ ನಾ
ಸತ್ಯವೊಂದನು ಹೇಳಲೇ?
- ಒಲವು-
- ಬಿ. ಎಮ್. ಚೇತನ್.
ಬಾಡಿದಂದು ಹೂವ ಚೆಲುವು
ಬಾಡಿತು ದುಂಬಿ ಹೂವ ಒಲವು ,
- ಏನಿದು ಸಂಭ್ರಮವೋ...-
-ಗುರು ಬಬ್ಬಿಗದ್ದೆ
ಹವ್ಯಕ ಸಮುದಾಯದವರು ಆದರಾತಿಥ್ಯದಲ್ಲಿ ಎಷ್ಟು ಮುಂದೋ ಹಾಗೆಯೇ ಸಂಪ್ರದಾಯದಲ್ಲಿಯೂ ಕೂಡ. ಅದರಲ್ಲೂ ಹವ್ಯಕರ ಮದುವೆಯೆಂದರೆ ಅದೊಂದು ವಿಶಿಷ್ಟ ಆಚರಣೆಯ ಹಬ್ಬ. ಕಾಲ ಬದಲಾಗುತ್ತಿದ್ದರೂ ತಮ್ಮ ಸಂಪ್ರದಾಯ, ಸಂಸ್ಕ್ರತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಹವ್ಯಕ ಜನಾಂಗವನ್ನು ಶ್ಲಾಘಿಸಲೇಬೇಕಾಗಿದೆ.
- ಮೂರು ಹನಿಗವನಗಳು-
- ಅರ್ಶದ್ ಹುಸೇನ್, ಶಾರ್ಜಾ
ಸ್ಪೇರ್ ಪಾರ್ಟ್ಸ್
ಎಷ್ಟು ಒಳ್ಳೆಯದಾಗುತ್ತಿತ್ತು
ಒಂದು ವೇಳೆ ಬದಲಿಸುವ ಹಾಗಿದ್ದರೆ
ಕಾರಿನ ಬಿಡಿಭಾಗಗಳ ಹಾಗೆ
ಮಾರ್ಪಡಿಸಬಹುದಿತ್ತು - ಎರೆಡು ಚುಟುಕು-
-ಅರ್ಶದ್ ಹುಸೇನ್ ಎಂ.ಹೆಚ್
ಸೃಷ್ಟಿಕರ್ತ
ಆಹಾ ಎಂಥಾ ನಯನ
ತಕ್ಕ ಸುಂದರ ವದನ - ಸಿರಿವಂತಿಕೆಯ ಸುತ್ತ.....-
- ಗುರು ಬಬ್ಬಿಗದ್ದೆ
ಶ್ರೀಮಂತರ ಗತ್ತು, ಗತ್ತು ಗಮ್ಮತ್ತು
ಹಣವನ್ನೇ ಕೂಡಿಟ್ಟು ಹಣವನ್ನೇ ಬಿತ್ತು - ಹಿಂದೆ ಹೊರಟವರು-
-ಗೋಪೀನಾಥ ರಾವ್
ಹಾಡು ಹೊಳೆಯ ಹಾಗೆ ಹರಿದಾಗ
ಕಲ್ಲು ಮಣ್ಣು ಕೆಂಪು ಬಣ್ಣ
ಕಸಕಡ್ಡಿ ಎಲ್ಲೆಂದರಲ್ಲಿ ಅಡ್ಡ ಸಿಕ್ಕಿ - ಪ್ರೇಮ-
- ನ್ಯಾ ಶಿ ವಿ
ಮನಸೊಂದು ಮನಸಿಂದ
ಮನಸಾರೆ ಪ್ರೇರಣೆಗೊಂಡು - ನಾ ನಡೆವ ಹಾದಿಯಲಿ -
- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ
ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧ - ಮತ್ಸರ ಮೂಡುತಿದೆ-
- ಶ್ರೀನಾಥ್ ಭಲ್ಲೆ
ಪ್ರಿಯಕರನೊಬ್ಬ ತನ್ನ ಪ್ರಿಯತಮೆಯೊಡನೆ ಸದಾ ಜೊತೆಗಿರುವ ಅಂಶಗಳನ್ನು ಕಂಡು ಕರುಬುತ್ತಾನೆ. ಅವುಗಳಲ್ಲಿ ಒಂದಾದರೂ ತಾನಾಗಿರಬೇಕೆಂದು ಬಯಸುವುದು ಅಡಕವಾಗಿದೆ. ಹಿಂದಿನ ಹಾಗೂ ಈಗಿನ ಕಾಲದ ಎರಡೂ ಕಲ್ಪನೆಗಳನ್ನು ಈ ಕವಿತೆಯಲ್ಲಿ ಉಣಬಡಿಸಲಾಗಿದೆ.
- ವ್ಯಾಲೆಂಟೈನ್ಸ್ ಡೇ-
- ನಿಶಿ (nishi)
ಭಾವನೆಗಳ ಉನ್ಮಾದ
ಶಿಖರಕ್ಕೇರಿ ಮುಗಿಲಿಗೆಟುಕುತ್ತವೆ
ಒಮ್ಮೊಮ್ಮೆ ನನ್ನಾತ್ಮ ಸಖನಿಗೆ - ಆ ಮನೆ...-
- ದತ್ತಾ ಹೆಗಡೆ
ಆ ಮನೆಯ ಬಾಗಿಲಲಿ ಚೆ೦ದದ ಚಿತ್ತಾರ,
ರ೦ಗೋಲಿಯೋ, ಜಲವರ್ಣಚಿತ್ರವೋ
ಅರಿಯೆನು ನಾ, ಅದು ನನ್ನ ಅಜ್ಞಾನ! - ಫುಟ್ ಪಾತಿನಲ್ಲಿ ನಾನು-
-ಗುರು ಬಬ್ಬಿಗದ್ದೆ
ಮಲಗಿದ್ದೆ ಫುಟಪಾತಿನಲ್ಲಿ ಇದ್ದ ಹಾಗೆ ಮಣ್ಣು
ನಿದ್ರೆಗೆ ಜಾರಿತ್ತು ಮುಚ್ಚಿತ್ತು ಕಣ್ಣು
ಆ ದಿನ ರಾತ್ರಿಯಲಿ ನಾ ಕನಸಿನಲ್ಲಿದ್ದೆ
ಎಲ್ಲಿದ್ದೆ ಹೇಗಿದ್ದೆ ನಾನರಿಯದಾಗಿದ್ದೆ ೧ - ಕುಸುಮದ ಚಡಪಡಿಕೆ-
- ನ್ಯಾ. ಶಿ. ವಿ.
ಮುಂಜಾನೆಯ ಇಬ್ಬನಿಯ ಮುತ್ತುಗಳಲಿ
ನವಿರಾಗಿ ಅರಳಿ ನಿಂತ ಕುಸುಮವೇ... - ಮದಕ್ಕೊ೦ದೆ ಮದ್ದು-
-ಮೃಣಾಲಿನಿ ಉದಯ ಕುಮಾರ್
ಸತ್ಯ ಸ್ವಾಮೀ ದೇವೇಗೌಡ ಇತ್ತೀಚೆಗೆ ಹೇಳಿದ ಮಾತು
"ನಾನು ಕರ್ನಾಟಕದಲ್ಲಿ ಹುಟ್ಟಬಾರದಾಗಿತ್ತು"
- ಕೂಗದಾದೆ ಏಕೆ ಮುಗ್ಧ ಕುರಿಯೇ....? -
- ನ್ಯಾ. ಶಿ. ವಿ(ನ್ಯಾ ಶಿ ವಿಶ್ವನಾಥ್)
ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು
ನಿನ್ನ ಆರ್ತನಾದದ ಕೂಗನು
ಕೇಳಿಸಿಕೊಳ್ಳುವವರ್ಯಾರೆಂಬ ಅಸಾಹಯಕತೆಯೇ? - ಇರಬೇಕು ಕನ್ನಡನಾಡಿನಲ್ಲಿ-
- ಸಂದೀಪ್ ಪಿ ಪಿ
ಇರಬೇಕು ಭಾರತದಲ್ಲಿ
ಹುಟ್ಟಬೇಕು ಕರ್ನಾಟಕದಲ್ಲಿ ಭಾರತಾಂಬೆಯ ಪುತ್ರನಾಗಿ
ಹಾರಿಸಬೇಕು ಕನ್ನಡದ ಕೀರ್ತಿಯನ್ನು
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
- ನಿನ್ನೊಲುಮೆ ನನಗಿರಲಿ-
- ಗುರು ಬಬ್ಬಿಗದ್ದೆ
ಏನಿದ್ದರೇನು, ನೀನಿಲ್ಲದಿರೆ ಮನವೆ
ಏನಾದರೇನು ನೀನಿದ್ದರೆ ಒಲವೆ ೧
- ನಿಸ್ವಾರ್ಥ ಪ್ರೇಮ-
- ಗುರು ಬಬ್ಬಿಗದ್ದೆ
ಬಾನ ಚಂದಿರನಲ್ಲಿ ನಗುತ ಸೂರ್ಯನ ಮನಸು
ಆಸೆಯಲಿ ಹೇಳಿತು ಪ್ರೀತಿ ಮಾಡುವ ಚಂದ್ರ
ಕೋಮಲ ಹೂವು ಸೂರ್ಯ ಕೆಂಡದ ಉಂಡೆ
ಸೌಮ್ಯಕೂ ಶಾಖಕೂ ಇಲ್ಲದು ದಂಡೆ ೧
- ವ್ಯಕ್ತಿಯಲ್ಲ, ಶಕ್ತಿ-
- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್
ಸರ್ ಎಡ್ಮ೦ಡ್ ಹಿಲರಿ, ಇದು ಕೇವಲ ಹೆಸರಲ್ಲ
ಜಗದೆಲ್ಲರ ಮನದಲ್ಲಿ ಸದಾ ಹಸಿರಾಗಿರುವ ದ೦ತಕಥೆ
ಹಿಮದ ಹಾದಿಯನೇರಿ ಎವರೆಸ್ಟ್ ತಲುಪಿದ್ದು ಕನಸಲ್ಲ
ಯಾರೂ ಸಾಧಿಸಿರದ ಗುರಿಯ ಗೆದ್ದ ಛಲಗಾರನ ಆತ್ಮಕತೆ - ಕೊರೆಯುವ ಚಳಿಗೆ ಜಾರಿದ ಹನಿಗಳು-
- ಗೋಪೀನಾಥ ರಾವ್
ಬೆಳಗಾತ ಎದ್ದು
ಮಾಡಿಕೊಟ್ಟೆ ಮಡದಿಗೆ
ಬಿಸಿಬಿಸಿ ಕಾಫಿ
ಮದುವೆಯಾಗಿನಿಂದ
ಇದುವರೆಗಿನ
ತಪ್ಪುಗಳೆಲ್ಲ ಮಾಫಿ...! - ನಗು-
- ಗುರು ಬಬ್ಬಿಗದ್ದೆ
ನಕ್ಕು ಬಿಡು ಮನದೆನ್ನೆ
ನಕ್ಕು ಬಿಡು ಒಮ್ಮೆ
ನೀನು ನಕ್ಕಾಗ ಆಗುವುದು ಸರ್ವಾಂಗಗಳಲು ಹೆಮ್ಮೆ ೧ - ಹೊಸ ವರ್ಷ-
- ಶ್ರೀನಾಥ್ ಭಲ್ಲೆಸುಖ ಶಾಂತಿ ಆಗದಿರಲಿ ಕನ್ನಡಿಯೊಳಗಿನ ಗಂಟು
ಶಾಂತಿ ನೆಮ್ಮದಿ ಹರಿಸಲಿ ಎರಡು ಸಾವಿರದ ಎಂಟು - ನಾ ನಡೆವ ಹಾದಿಯಲಿ-
- ಗುರು ಬಬ್ಬಿಗದ್ದೆ
ನಾ ನಡೆವ ಹಾದಿಯಲಿ ಕಲ್ಲು ಮುಳ್ಳುಗಳಿರದಿರಲಿ
ಸೃಷ್ಟಿ ಸೊಬಗಿನ ಚೆಲುವೆ ಆಡುತಿರಲಿ
ಸಂತೋಷದಿ ಹೂವು ಬಿರಿಯುತಿರಲಿ ೧
- ಹೊಸ ವರ್ಷ ಹೊಸ ದಿಗಂತ-
- ಆಸು ಹೆಗ್ಡೆ, ಬೆಂಗಳೂರು
ಚರಿತ್ರೆಯಾಯಿತು ಕಾಲ ಗರ್ಭದಲಿ ಸೇರಿ, ಮತ್ತೊಂದು ವರುಷ,
ಕೆಲವರಿಗೆ ನೀಡಿತ್ತು ನೋವು, ಇನ್ನು ಹಲವರಿಗೆ ತಂದಿತ್ತು ಹರುಷ;ಹರುಷದಿಂದ ನಲಿವವನಿಗಿಲ್ಲ, ಸುತ್ತಲಿನ ಅಭಾಗ್ಯರ ನೋವಿನ ಪರಿವೆ,
ಅವನನ್ನುತ್ತಾನೆ ಅನ್ಯರು ಹೇಗಿದ್ದರೇನು, ನಾ ಮಾತ್ರ ಹೀಗೆ ಇರುವೆ; - ಹೃದಯ ಕದ್ದ ಕಳ್ಳಿ-
-ಗುರು ಬಬ್ಬಿಗದ್ದೆ
ನನ್ನ ಒಲವ ಬಳ್ಳಿ ನೀ ಹೃದಯ ಕದ್ದ ಕಳ್ಳಿ
ಪ್ರೇಮಪಾಠದಲ್ಲಿ ನನ್ನನ್ನೇ ಗೆದ್ದ ಮಳ್ಳಿ
- ಹೊಸ ವರುಷ-
-ತ ವಿ ಶ್ರೀನಿವಾಸ, ಮುಂಬೈ
ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲು ಯಾರಿಂದಲೂ ಆಗದೇ?
ಆಗದು
ಏನೇ ಮಾಡಬಲ್ಲ
ಏನನೂ ಹಾಳು ಮಾಡಬಲ್ಲ
ಹುಲುಮಾನವನಿಂದಂತೂ ಅದಾಗದು! - ಭಗ್ನ ಪ್ರೇಮಿಯ ಹಿತವಚನಗಳು-
- ಗೋಪೀನಾಥ ರಾವ್.
ಸತ್ಯವೆಂದು
ನಂಬಿಸಿದ್ದೇ ಸುಳ್ಳು
ಪ್ರೀತಿಸಿದ ಹೃದಯವನ್ನು
ಚುಚ್ಚಿದ್ದೇ ಮುಳ್ಳು - ಕಿಲುಬು ಸಂಸ್ಕೃತಿ-
- ಗೋಪೀನಾಥ ರಾವ್
ಹಗಲಲ್ಲಿ ರಂಜನೆಯ ಹಾಡು, ನೃತ್ಯ
ರಾತ್ರಿ ಇನ್ನೊಂದು ಜಾಡು.. ದಿನನಿತ್ಯ
ಇದು ಹಲವು ಕಲಾವಿದೆಯರ ಪಾಡು
ನಮ್ಮದು ಕಾಡು ಸಂಸ್ಕೃತಿಯ ನಾಡು - ಬಾಸು - ಸೊಳ್ಳೆ-
- ತಳಕು ಶ್ರೀನಿವಾಸ, ಮುಂಬೈ
ನಾನೊಂದು ಸೊಳ್ಳೆ
ಎಲ್ಲರ ರಕ್ತವ ಹೀರಿ ಬದುಕುವ
ಹಿಡಿಮುಷ್ಟಿಗಳ ಏಟಿಗೆ ತತ್ತರಿಸಿ ಬೀಳುವ
ಸೊಳ್ಳೆ - ಕೆಲವರ ಮಾತಲಿ ತೊಳ್ಳೆ
ನನ್ನದು ರಕ್ತಾಬೀಜಾಸುರನ ಸಂತತಿ
ನನ್ನ ಕೊಂದರೇನು ... - ಓ ಬನ್ನಿ ಬಾಂಧವರೇ...-
- ಗುರು ಬಬ್ಬಿಗದ್ದೆ
ಬನ್ನಿರೆಲ್ಲ ಭಾಂಧವರೆ ಹೊಸ ನಾಡನು ಕಟ್ಟೋಣ
ಜಾತಿ ಮತಗಳ ಮೀರಿದ ಹೊಸ ಜಾಡನು ಹುಡುಕೋಣ
- ಹಾಳು ನೆನಪು-
- ಗೋಪೀನಾಥ ರಾವ್
ಹಾಳು ನೆನಪು
ಕಾಳು ಹಾಕಿ ಸಾಕಿದ ಕಾಗೆಯಂತೆ
ಸುತ್ತಿ ತಿರುಗಿ ಪುನಃ ಅಲ್ಲಿಗೇ ಬಂದು
ಹೇಳದೇ ಕೇಳದೇ ಗಟ್ಟಿಯಾಗಿ ತನ್ನಿರವನ್ನು ಅರಚುತ್ತದೆ
ಅಸಲಿನೊಡನೆ ನುಸುಳಿ ಬರುವ ಬಡ್ಡಿಯಂತೆ - ಭಾಜಪ-ಜಪ-
-ತಳಕು ಶ್ರೀನಿವಾಸ, ಮುಂಬೈ
(ಇದೊಂದು ಅಣುಕು ಕವಿತೆ - ಕವಿ ಕೆ.ಎಸ್.ನ ಅವರ ಕ್ಷಮೆ ಕೋರಿ)
ಮದುವೆಯಾಗಿ ವಾರವಿಲ್ಲ
ನೋಡಿರಣ್ಣ ಹೇಗಿದೆ
ಕುಮಾರು ಕೂಗಿದಾಗಲೆಲ್ಲ ಓಡಿ ಬರುವ
ಯಡ್ಡಣ್ಣ ಹಿಂದೆ ಮುಂದೆ ನೋಡದೆ
- ಕವಿತೆ ಬಂದಳು-
ಕಥೆ ಬರೆಯಬೇಕೆಂದು ಕುಳಿತಿದ್ದೆ
ಕವಿತೆ ಬಂದಳು.
ತಿದ್ದಿ ತೀಡಿದ ಛಂದೋರೂಪ
ಹಂಸನಡಿಗೆಯ ಪಾದಗತಿ
ಕಣ್ಣಲ್ಲಿ ಸೂರ್ಯರಶ್ಮಿ
ಮುಖದಲ್ಲಿ ಚಂದ್ರಹಾಸ
ಹೀಗೆ
ಕವಿತೆ ಬಂದಳು. - ಗೀತಾ ಪಾರಾಯಣ-
- ಗುರು ಬಬ್ಬಿಗದ್ದೆ
ನನ್ನಯ ಜೀವದ ಅರಗಿಣಿಯೆ ಮುತ್ತಿನ ಪ್ರೇಮದ ಅಭಿಷೇಕ
ನಿನ್ನಯ ಮಾತಿನ ಮುತ್ತುಗಳು ದೂಡಿವೆ ನನ್ನಯ ಕಡು ಶೋಕ ೧
ನೀನಿದ್ದರೆ ಜೊತೆಯಲಿ ಜಯವಿಹುದು ಎಲ್ಲವು ನನ್ನೆದೆ ತಟ್ಟುವುದು
- ಹೇ ಮಾರಿಕಾಂಬೇ-
- ಗುರು ಬಬ್ಬಿಗದ್ದೆ
ವಂದಿಪೆನು ಮಾರಿಕಾಂಬೆ ನಿನ್ನ ಮಡಿಲಿಗೆ
ಭಕ್ತ ಜನರ ಪೊರೆವ ಪ್ರೀತಿವಿತ್ತ ತಾಯಿಗೆ
ಸಿರಸಿಪುರದ ನಡುವೆ ಇರುವ ಲೋಕಮಾತೆಗೆ
ಕರುಣೆಯಿಂದ ವರವ ನೀಡ್ವ ಲೋಕಜನನಿಗೆ ೧
- ಇದೋ ಬಂತು ದೀಪಾವಳಿ ! !-
- ದಿವ್ಯಾ ರಾವ್
ಇದೋ ಬಂತು ಬೆಳ್ಳ ಬೆಳಕಿನ ದೀಪಗಳ ಹಬ್ಬ
ಅಂಧಕಾರವ ತೊಳೆದು, ಬಾಳ ಬೆಳಗುವ ಹಬ್ಬ
ಅಬಾಲ ವೃದ್ಧರು ಒಂದಾಗಿ ನಲಿಯುವ ಹಬ್ಬ
ಮನೆ ಮನದಿ ಬೆಳಕ ಚೆಲ್ಲುವ ಹಬ್ಬ
- ನಿರೀಕ್ಷೆ-
- ಮೃಣಾಲಿನಿ ಉದಯ್ ಕುಮಾರ್, ನ್ಯೂಜಿಲೇಂಡ್
ವರ್ಷವಿಡೀ ಸಭೆಯೊಳಗೆ ಬೆತ್ತಲಾದವಳಿಗೆ
ಇಂದು ಜರತಾರಿಯುಡಿಸಿ ಮೆರವಣಿಗೆ
ನಿತ್ಯ ಕಣ್ಣೀರಲೆ ಕೈತೊಳೆಯುವವಳಿಗೆ
ಬೇಕೆ ಈ ದಿನ ಹುಟ್ಟುಹಬ್ಬದ ಕೊಡುಗೆ?ಕರ್ನಾಟಕ ಹೆಸರಾಗಿತ್ತು ಗಂಡೆದೆಯ ಕಲಿಗಳಿಗೆ
ಇಂದು ಕುತಂತ್ರವೆ ಆಯುಧ ರಾಜಕಾರಣಿಗಳಿಗೆ
ದಿನನಿತ್ಯ ಕುರುಕ್ಷೇತ್ರ ಕದನ ನಡೆದಿದೆ ಕುರ್ಚಿಗೆ
ಮನೆಯೆ ಮಸಣವಾಗಿರಲು ಹಬ್ಬ ಬೇಕೆ ತಾಯಿಗೆ? - ಓ ತಾವರೆ-
-ಗುರು ಬಬ್ಬಿಗದ್ದೆ
ಮರೆಯಬೇಡ ಮರೆಯಬೇಡ ಮರೆಯಬೇಡ ಎನ್ನ
ಮರೆತರೆ ಮರೆಯಾಗುವೆ ಮನದಿಂದ ಚಿನ್ನ
ಮದನನ ಮದವೇರಿದ ಮನಸಿದು ಮಾಗುವ ಮುನ್ನ
ಮಾಮರದ ಮಾರ್ದನಿಗೆ ಮಾಲೆಯ ಹಾಕುವ ಮುನ್ನ ೧ಮಸುಕಾಗಿದೆ ಮಬ್ಬಿನಲಿ ಮಿಸುಕಾಡಿದೆ ಮುಖವು
ಮನಗಾಣಿಸು ಮಮತೆಯಲಿ ಮರಳಿದೆ ಸುಖವು
ಮಹನೀಯಳೆ ಮಾಣಿಕ್ಯವೆ ಮೆಚ್ಚಿದೆ ನಿನ್ನನ್ನ
ಮಾಂತ್ರಿಕ ಮೃದು ಸ್ಪರ್ಶಕೆ ಮಾಗಿದೆ ಮೈ ಬಣ್ಣ ೨- ನವಭಾರತ-
-- ಮೋಹನ್ ಕೃಷ್ಣ ಟಿ.ಕೆಸುವರ್ಣಾಕ್ಷರಗಳಲ್ಲಿ ಲಿಖಿತ ಇತಿಹಾಸವೀಗ ಗತಕಾಲದ ಗೊಡ್ಡು ಪುರಾಣ
ಸರ್ವತಂತ್ರ ಸ್ವತಂತ್ರ ಗಣತಂತ್ರವೀ ಭಾರತ
ಭ್ರಷ್ಟರನ್ನೇ ಆಯ್ಕೆಗೊಳಿಸುವ ದುರ್ಬಲ ಚುನಾವಣಾಪದ್ಧತಿ
ಓಟಿಗಾಗಿ ಪ್ರಜೆಗಳಿಗೆ ಕುಡಿಸಿದ್ದು ಧರ್ಮದ ಅಫೀಮು ! - ನವಭಾರತ-



