- ನೆನಪುಗಳು-
-ಅರುಣ್ ಕುಮಾರ್ ಹೆಚ್ ಎಸ್.
೧
ಬಿ೦ಕದ ಹೆಜ್ಜೆಯ ಹೆಣ್ಣು
ಕೆರೆಯಿ೦ದ ನೀರು ತರುತಿರಲು
ಕೇಳಿದೆನು ನೀರು ಬೇಕೆ೦ದು.
ಸ್ವಲ್ಪವೇಕೆ, ಕೊಡದ ನೀರೆಲ್ಲ ನಿನಗೆ
ಹೇಳುತ್ತಾ ನಕ್ಕಳಾ ಜಾಣೆ. - ಎನ್ನ ಮನ್ನಿಸು ತಾಯೇ-
-ಶ್ರೀನಾಥ್ ಭಲ್ಲೆ
ಮನುಷ್ಯ ಕ್ರೂರ ಪ್ರಾಣಿ. ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರೂ ವಂಚಿಸುತ್ತಾನೆ. ತನ್ನ ಮಾತು, ಕ್ರಿಯೆಗಳಿಂದಲೇ ಇನ್ನೊಬ್ಬರನ್ನು ಕೊಲ್ಲುತ್ತಾನೆ. ಕೆಲವೊಮ್ಮೆ ಕೊನೆಗೊಂದು ದಿನ ಕೆಟ್ಟ ಮನಸ್ಸಿಗೆ ಬುದ್ದಿ ಬರಬಹುದು. ಈ ಕವಿತೆಯೊಲ್ಲಬ್ಬ ಕೊನೆಗಾಲದಲ್ಲಿ ತನ್ನ ತಪ್ಪುಗಳನ್ನು ತಾಯಿಯಲ್ಲಿ ನಿವೇದಿಸಿಕೊಂಡು ಕಣ್ಣೀರಿಡುತ್ತಾನೆ. ಆದರೆ ಸಾಂತ್ವನ ನೀಡಲು ಆಕೆ ಇರುವುದಿಲ್ಲ. ತಪ್ಪನ್ನು ನಿವೇದಿಸಿಕೊಂಡ ಸಮಾಧಾನವಷ್ಟೇ ಅವನಲ್ಲಿ ಉಳಿಯುತ್ತದೆ.
- ಕಂ-ಪತಿಗಳು-
ಕಂ-ಪತಿಗಳು (ಕಂಪ್ಯೂಟರ್ ಪತಿಗಳು)
-ಶ್ರೀನಾಥ್ ಭಲ್ಲೆ
ಪಾತ್ರಧಾರಿಗಳು:
ಮೂರು ಜನ ಹೆಂಗಸರು - ಶಾಂತ, ಮಾಲ, ಇಳ
ಮೂರು ಜನ ಗಂಡಸರು - ಪ್ರಶಾಂತ, ಬಾಲ, ನಳ
ಡಾಕ್ಟರ್ ಹಾಗೂ ಪೇಶಂಟ್/ಕಾಂಪೌಂಡರ್/ಟೆಲಿಫೋನ್ ರಿಪೇರ್ ಮಾಡುವವವ
ಶಾಂತ: (ಕಿಟಕಿ ಧೂಳು ಹೊಡೇಯುತ್ತ) ಇವರಿಬ್ರೂ ಬರೋದು ಇನ್ನೂ ಎಷ್ಟೊತ್ತು



