ಸಂಚಿಕೆ 41, ಸಂಪುಟ 4, ಆಗಸ್ಟ್ 1, 2008
Submitted by Gopinatha Rao on August 8, 2008 - 11:04am.
ಮದುವೆಯಲ್ಲಿ ಅಣ್ಣ
ಅಂದು: ತವರಿಗೆ ಹೆಸರು ತಾ ತಂಗಿ
ನಲಿಯುತ್ತಾ ಇರು ಕಷ್ಟಗಳನ್ನು ನುಂಗಿ
ಇಂದು: ಹೆಚ್ಚಾದರೆ ಅತ್ತೆ-ನಾದಿನಿಯರ ತರಾಟೆ
ಉಪಯೋಗಿಸು ನಾನು ಕಲಿಸಿದ ಕರಾಟೆ
ಅಮರ ಪ್ರೇಮಿ
ಮುಟ್ಟಲಾಗಲಿಲ್ಲ ಪ್ರೀತಿಯ ತೀರ
ಕಾಲವೂ ತಳ್ಳಿತು ದೂರ
ಇಂದು ನೆನಪುಗಳೇ ಬೆಚ್ಚಗೆ
ಮರೆಯಲಾಗದು ಆ ಹುಚ್ಚಿಗೆ
ಹೆಂಡತಿ ತವರಿಗೆ ಹೋದಾಗ
ಮುಗಿಯುವುದಿಲ್ಲ ಮಾಡಿದಷ್ಟೂ ಕೆಲಸ
ಮುಂಜಾನೆ ಗುಡಿಸಿದರೆ ಸಂಜೆಗೆ ಕಸ
ಅವಳ ಶ್ರಮ ನೋಡುತ್ತಿದ್ದೆ ನಿಂತು
ಈಗ ಬಗ್ಗಿದಾಗ ಸೊಂಟ ಬುದ್ಧಿ ಬಂತು








