ವರದಿ
6322_20.jpg

- ಗೋಪೀನಾಥ ರಾವ್ 

ಗಲ್ಫ್ ನಾಡಿನಲ್ಲಿ ವಿಶಿಷ್ಟ ಕನ್ನಡ ಕಾರ್ಯಕ್ರಮಗಳಿಂದಾಗಿ ತನ್ನೇ ಆದ ಛಾಪು ಬೆಳೆಸಿಕೊಂಡಿರುವ ಧ್ವನಿ ಪ್ರತಿಷ್ಠಾನ ಈ ಬಾರಿ ಶೇಖರ್ ಬಿ. ಶೆಟ್ಟಿ ಹಾಗು ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಸನ್ಮಾನ, ಹಿಟ್ಟಿನ ಹುಂಜ ನಾಟಕದ ಮುಹೂರ್ತ ಹಾಗೂ ಅನಿವಾಸಿ ಆತ್ಮಾವಲೋಕನ ಹೀಗೆ ಮೂರು ಕಾರ್ಯಕ್ರಮಗಳನ್ನು ಕಳೆದವಾರ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿತ್ತು.   ಪೂರ್ತಿ ಓದಿ... »

shiva.jpg

   - ನ್ಯಾಮತಿ ಎಸ್. ವಿಶ್ವನಾಥ್. 

  ದುಬ್ಯೆನ ಕನ್ನಡಕೂಟ ಮತ್ತು ಬಸವ ಸಮಿತಿಯಿಂದ ಮಾರ್ಚ್ ೦೬ರಂದು
ದುಬ್ಯೆನ ಕರಾಮ ಸೆಂಟರಿನ ಪಾರ್ಟಿ ಹಾಲ್ ನಲ್ಲಿ ಆಯೋಜಿಸಲಾಗಿದ್ದ "ಮಹಾ ಶಿವರಾತ್ರಿ" ಹಬ್ಬದ ಆಚರಣೆಯನ್ನು ಕನ್ನಡಿಗರೆಲ್ಲಾ ಸೇರಿ ಸಂಭ್ರಮ ಸಡಗರಗಳಿಂದ ಆಚರಿಸಿದೆವು.   ಪೂರ್ತಿ ಓದಿ... »

10108yaksha1.jpg

- ಗೋಪೀನಾಥ ರಾವ್

ತೆಂಕು ತಿಟ್ಟಿನ ಯಕ್ಷಗಾನ ದುಬೈಯಲ್ಲಿ ಇದೀಗ ವರ್ಷಂಪ್ರತಿ ನಡೆಯುವ ಕಲಾ ಕಾಣಿಕೆಯಾಗಿ ಮೂಡಿ ಬಂದಿದೆ. ತಾಯ್ನಾಡಿನಿಂದ ಪ್ರತಿಭಾವಂತರನ್ನು ಕರೆದುತಂದು ಅವರೊಡನೆ ಒಂದೆರಡು ಕ್ಷಿಪ್ರ ತಾಲೀಮು ನಡೆಸಿ ಅವರ ಅನುಭವದ ಪ್ರಯೋಜನ ಪಡೆದು ಪ್ರದರ್ಶನ ರೂಪಿಸುತ್ತಾ ಬಂದಿರುವ ಯಕ್ಷಮಿತ್ರರು ಬಳಗ ಈ ಬಾರಿ ಕರೆದು ತಂದದ್ದು ಸಿದ್ಧಕಟ್ಟೆ ಚಿನ್ನಪ್ಪ ಶೆಟ್ಟಿ, ಭಾಗವತರಾದ ಜಯಪ್ರಕಾಶ್ ನಿಡುವಣ್ಣಾಯ ಮತ್ತು ಚೆಂಡೆವಾದಕ ಗಣೇಶ ಮಯ್ಯರನ್ನು. ಜೊತೆಗೆ ಬಣ್ಣಗಾರಿಕೆ ಮತ್ತು ವೇಷಕಟ್ಟುವುದಕ್ಕೆ ಇದ್ದವರು ಯಕ್ಷಮಿತ್ರರು ಬಳಗದ ಖಾಯಂ ಅತಿಥಿ ಕಲಾವಿದ ಶ್ರೀ ಪಿ ವಿ ಪರಮೇಶ್.   ಪೂರ್ತಿ ಓದಿ... »

kannadasanghamumbai.jpg

- ರೋನ್ಸ್ ಬಂಟ್ವಾಳ, ಮುಂಬೈ


ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ ಸುವರ್ಣ ಮಹೋತ್ಸವ ಸಮಾರಂಭವು ಇಂದಿಲ್ಲಿ (೧೬.೧೨.೨೦೦೭) ಭಾನುವಾರ ಬೆಳಿಗ್ಗೆಯಿಂದ ಒಂದು ದಿನದ ಸಂಭ್ರಮದ ಕಾರ್ಯಕ್ರಮದೊಂದಿಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.

  ಪೂರ್ತಿ ಓದಿ... »

beejisanmana.jpg

- ಅರ್ಶದ್ ಹುಸೇನ್, ಶಾರ್ಜಾ 

ಶಾರ್ಜಾ ಕರ್ನಾಟಕ ಸಂಘದ ಐದನೆಯ ವಾರ್ಷಿಕೋತ್ಸವ ಕಳೆದ ಶುಕ್ರವಾರ ರಾತ್ರಿ ವಿಭಿನ್ನ ರೀತಿಯಲ್ಲಿ ನಡೆದು ಅಭೂತಪೂರ್ವ ಯಶಸ್ಸು ಕಂಡಿತು. ಯು.ಎ.ಇ.ಯಲ್ಲಿ ಪ್ರಥಮ ಬಾರಿಗೆ ಕನ್ನಡಪರ ಕಾರ್ಯಕ್ರಮವೊಂದನ್ನು ತೆರೆದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.   ಪೂರ್ತಿ ಓದಿ... »

vedike.jpg

- ರಂಜನಿ ಸುರೇಶ್

ಡಿಸೆಂಬರ್ ೩ ಕರ್ನಾಟಕ ಸಂಘ ದುಬೈಗೆ ಅವಿಸ್ಮರಣೀಯ ದಿನವಾಗಿತ್ತು. ಹಿರಿಯರೂ ಗೌರವಾನ್ವಿತರೂ ಖ್ಯಾತ ಕವಿಗಳೂ ರಾಷ್ಟ್ರ ಕವಿ ಬಿರುದಾಂಕಿತರೂ ಆಗಿರುವ ಡಾ ಜಿ ಎಸ್ ಶಿವರುದ್ರಪ್ಪ ಮತ್ತು ಅವರ ಸಹಧರ್ಮಿಣಿ ರುದ್ರಾಣಿ ದಂಪತಿಗಳನ್ನು ಅಭಿನಂದಿಸುವ ಅವಕಾಶ ಲಭಿಸಿದ್ದು ಸಂಘಕ್ಕೆ ಒಂದು ಅಪೂರ್ವವಾದ ಗೌರವವಾಗಿತ್ತು.   ಪೂರ್ತಿ ಓದಿ... »

710_1.jpg


ಯು ಎ ಇ ಯಲ್ಲಿ ಕರ್ನಾಟಕದ ವಿವಿಧ ಸಂಘ ಸಂಸ್ಥೆಗಳು ಚಾಲನೆಯಲ್ಲಿದ್ದರೂ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವೇದಿಕೆಯೊಂದು ಕಾಣಿಸಿಕೊಂಡದ್ದೇ ಅಪರೂಪ. ಈ ಕೊರತೆ ನಿವಾರಿಸಲು ಅನೇಕ ಮಂದಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ.   ಪೂರ್ತಿ ಓದಿ... »

kwt prakash.jpg

 

ಕುವೈತ್ ಕನ್ನಡ ಕೂಟವು ಹೃದಯವಾಹಿನಿ ಸಹಯೋಗದೊಂದಿಗೆ ಕುವೈತ್ ನಲ್ಲಿಆಯೋಜಿಸಿದ್ದ ವಿಶ್ವ ಕನ್ನಡ ಸಾಂಸ್ಕ್ರತಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದುಬೈಯ ಪ್ರಕಾಶ್ ರಾವ್ ಪಯ್ಯಾರ್ ಅವರನ್ನು ಹೊರನಾಡಿನಲ್ಲಿ ಕನ್ನಡ ಬಾಷೆ ಮತ್ತು ಸಂಸ್ಕ್ರತಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಸಮ್ಮೇಳನಾಧ್ಯಕ್ಷ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.   ಪೂರ್ತಿ ಓದಿ... »

raajyotsava4-high-res.jpg

- ಅರ್ಶದ್ ಹುಸೈನ್ ಎಂ ಎಚ್

ದುಬೈಯಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಿರುವ ಅನೇಕ ಕನ್ನಡ ಸಂಘ ಸಂಸ್ಥೆಗಳೊಂದಿಗೆ ಕನ್ನಡಕೂಟ ಯು.ಎ.ಇ. ಸಹಾ ತನ್ನ ಅಳಿಲ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬೇಕೆಂದು ನಿಶ್ಚಯಿಸಿದ ಕೂಟದ ಸದಸ್ಯರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.   ಪೂರ್ತಿ ಓದಿ... »

adhrajyotsava

ಅಬುಧಾಬಿ ಕನ್ನಡ ಸಂಘವು 51ನೆಯ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮವು ಹಾಸ್ಯ, ಕವನವಾಚನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡಿದ್ದು ನೆರೆದಿದ್ದ ಕನ್ನಡಿಗರ ಮನಸೂರೆಗೊಂಡಿತು.   ಪೂರ್ತಿ ಓದಿ... »

Syndicate

Syndicate content
Syndicate content