-ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫ಼ೋರ್ನಿಯ.
ಸಹೃದಯ ಗೋಷ್ಠಿ ಹಮ್ಮಿಕೊಂಡಿದ್ದು, ಸಹೃದಯತೆಗೆ ಹೆಸರಾದ ನಮ್ಮ ಬೇ ಏರಿಯಾದ ಅಪರೂಪ ಮತ್ತು ಅನುರೂಪ ದಂಪತಿಗಳಾದ, ಅಲಮೇಲು ಮತ್ತು ತಿರುನಾರಾಯಣ ಐಯ್ಂಗಾರ್ ಅವರು. ಸಾಹಿತ್ಯಾಸಕ್ತರೂ, ಸ್ವತಃ ಕವಿಗಳೂ ಆದ ಈ ದಂಪತಿಗಳು ಸರಟೋಗಾದಲ್ಲಿರುವ ಅವರ ಸುಂದರವಾದ ಸ್ವಗೃಹದಲ್ಲಿ ಈ ಗೋಷ್ಠಿಯನ್ನು ಜುಲೈ ೨೬ ರ ಶನಿವಾರ ಸಂಜೆ ಏರ್ಪಡಿಸಿದ್ದರು. ಈ ಗೋಷ್ಠಿಯ ಇನ್ನೊಂದು ವಿಶೇಷತೆ ಏನೆಂದರೆ, ಪು ತಿ ನ ಅವರೇ ಈ ವೇದಿಕೆ ಮೇಲೆ ಮೊದಲನೆಯ ಗೋಷ್ಠಿಯಲ್ಲಿ ಮಾತನಾಡಿ ನಂತರ ಹಲವಾರು ಸುಪ್ರಸಿದ್ಧ ಕನ್ನಡ ಸಾಹಿತಿಗಳು, ಡಾ. ಜಿ.ಎಸ್. ಶಿವರುದ್ರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ ಮುಂತಾದವರು ಮಾತನಾಡಿ ಅಣಿಮಾಡಿದ ವೇದಿಕೆ ಇದು.
-ಶ್ರೀನಾಥ್ ಭಲ್ಲೆ, ಮುಂಬೈ
ನನಗಂತೂ ಸುಳ್ಳು ಹೇಳಲಿಕ್ಕೆ ಬರೋಲ್ಲ ...... ವಾವ್ ... ನೋಡಿ, ಅದೇ ದೊಡ್ಡ ಸುಳ್ಳು ...... ನಿಂತ ನಿಲುವಲ್ಲೇ ಸುಳ್ಳು .... ಸತ್ಯದ ತಲೆ ಮೇಲೆ ಹೊಡೆದಂತಹ ಸುಳ್ಳು .... ಸುತ್ತಿಕೊಳ್ಳಲೂ ಕಷ್ಟವಾಗುವಂತೆ ರೀಲು ...
- ಗುರು ಬಬ್ಬಿಗದ್ದೆ
ಮಾವ ನಿನ್ನ ಮನೆಗೆ, ಅಳಿಯನಾಗಿ ಬರಲೇ
ಮಗನಾಗಿ ಬರಲೇ, ಬೆಳಕಾಗಿ ಬರಲೇ
ನಿನ್ನ ಮಗಳ ಮೇಲೆ ಒಲವಾಗಿ ಬರಲೇ
ನದಿಯಾಗಿ ಬರಲೇ, ಪ್ರೀತಿ ಅಲೆಯನ್ನು ತರಲೇ ೧



