-ಅರ್ಶದ್ ಹುಸೇನ್ ಎಂ. ಹೆಚ್.
(ಈ ಲೇಖನದ ಸಾರಾಂಶ ಕನ್ನಡ ವಾರಪತ್ರಿಕೆ-'ತರಂಗ'ದ ೨೪ನೇ ಏಪ್ರಿಲ್ ಸಂಚಿಕೆಯಲ್ಲಿ ಪ್ರಕಟವಾಗಿದೆ)
ಕೈಗಡಿಯಾರ ನಮ್ಮೆಲ್ಲರ ಬಳಿ ಇದೆ. ಹಿಂದಿನವರಿಗೆ ಹೋಲಿಸಿದರೆ ನಮ್ಮ ಬಳಿ ಇರುವ ಕೈಗಡಿಯಾರಗಳು ಹೆಚ್ಚು ಕರಾರುವಾಕ್ಕಾಗಿಯೂ ಸುಂದರವಾಗಿಯೂ ಇದೆ. ಕೈಗಡಿಯಾರದ ವಿನ್ಯಾಸ, ಬಿಡಿಭಾಗ, ವೈಶಿಷ್ಟ್ಯತೆ, ತಯಾರಿಸುವ ಸಂಸ್ಥೆ ಇತ್ಯಾದಿಗಳನ್ನವಲಂಬಿಸಿ ನೂರು ರೂಪಾಯಿಯಿಂದ ಲಕ್ಷ ರೂಪಾಯಿ ಬೆಲೆಬಾಳುವ ಕೈಗಡಿಯಾರ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಯಾವುವೂ ಇಂದು ಲಭ್ಯವಿರುವ ಅತ್ಯಂತ ದುಬಾರಿ ಕೈಗಡಿಯಾರದ ಒಂದು ಭಾಗಕ್ಕೂ ಸಮನಾಗುವುದಿಲ್ಲವೆಂದರೆ ನಂಬುತ್ತೀರಾ?   ಪೂರ್ತಿ ಓದಿ... »
-ನಳಿನಿ ಸೋಮಯಾಜಿ
ಕನ್ನಡ ಕೌಸ್ತುಭ
ಝೀ ಟಿವಿ ರೂಪಿಸಿತ್ತು ಕನ್ನಡ ಕೌಸ್ತುಭ ಕಾರ್ಯಕ್ರಮವನ್ನು
ಕೂಡಿಸಿ ತಂದಿತ್ತು ಕನ್ನಡ ಸಿನೆಮಾ-ಕಿರುತೆರೆ ನಟ ನಟಿಯರನ್ನು
ಕೈ ಜೋಡಿಸಿ ಕರೆದಿತ್ತು ದುಬೈ ಕರ್ನಾಟಕ ಸಂಘ ಇವರೆಲ್ಲರನ್ನು
ಕಲಾವಿದರ ಹಾಡು ನರ್ತನ ಮನ ರಂಜಿಸಿತ್ತು ನೆರೆದಿದ್ದ ರಸಿಕರನ್ನು   ಪೂರ್ತಿ ಓದಿ... »
-ಸುನಿಲ್ ಮಲ್ಲೇನಹಳ್ಳಿ
ಸ್ನೇಹಿತರೇ, ಇನ್ನು ಬೆರೆಳೆಣಿಕೆಯ ದಿನಗಳಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಅದರಂತೆ ಮುಂದಿನ ದಿನಗಳಲ್ಲಿ ನಮ್ಮ ಈ ವಿಮಾನ ನಿಲ್ದಾಣದಿಂದ ನಾನಾ ದೇಶಗಳ ನಾನಾ ನಗರಗಳಿಗೆ ದಿನನಿತ್ಯ ಒಂದರ ಹಿಂದೆ ಒಂದರಂತೆ ವಿಮಾನಗಳು ಹಾರಾಡುತ್ತಲೇ ಇರುತ್ತವೆ. ಇದು ಕನ್ನಡಿಗರಿಗಂತೂ ಸಂತಸ ತರುವ ವಿಷಯವೇನೋ ಸರಿ.   ಪೂರ್ತಿ ಓದಿ... »
-ಸುರಭಿ
ಸೂರ್ಯನು ಪಶ್ಚಿಮದಲ್ಲಿ ಮುಳುಗಿ ಹೊತ್ತು ಸರಿದಿತ್ತು.ಗ೦ಗ ಎ೦ದಿನ೦ತೆ ಕೆಲಸ ಬಿಟ್ಟು ಮನೆ ಕಡೆ ನಡೆಯುತ್ತಿದ್ದಳು."ಗ೦ಗ, ಕೆಲಸದಿ೦ದ ಬರ್ತಾ ಇದ್ದಿಯಾ?" ವಿಶಾಲಕ್ಕ ದಾಮು ಅ೦ಗಡಿಗೆ ಬೀಡಿ ಕೊಡಲು ಹೋಗುವವಳು ಒ೦ದು ಫರ್ಲಾ೦ಗ್ ದೂರದಿ೦ದಲೇ ಗ೦ಗ ಬಸ್ ಇಳಿದು ಬರುವುದನ್ನು ಕ೦ಡು ಕೇಳಿದಳು. "ಹೌದು ವಿಶಾಲಕ್ಕ.." ಗ೦ಗ ಆ ಬದಿಗೆ ನೋಡದೆ ಮಾರ್ಗದಲ್ಲಿ ದಾಪುಗಾಲು ಹಾಕತೊಡಗಿದಳು.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ
ದ್ವಾಪರ ಯುಗದ ಹಲವರಿಗೆ ಸ್ವರ್ಗಲೋಕದಲ್ಲಿದ್ದು ಬಹಳ ಬೋರಾಯಿತು. ದಿನವೂ ಅದೇ ಮುಖಗಳು. ಭೂಲೋಕದಲ್ಲಿ ಪಾಪ ಹೆಚ್ಚಾಗಿರೋದ್ರಿಂದ ಸ್ವರ್ಗಲೋಕದಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿಲ್ಲ. ನರಕಲೋಕದ ಕಾಲ್ ಸೆಂಟರ್’ಗಳು ಇತ್ತೀಚೆಗೆ ತಮಗೆ ವಿಪರೀತ ಕೆಲಸವಾಗಿದೆ ಅಂತ ಗೊಣಗುತ್ತಿದ್ದಾರೆ. ಪ್ರತಿ ಸಾವಿಗೂ ಇವರಿಗೆ ಫೋನ್ ಬರುತ್ತೆ. ಈಚೆಗಂತೂ ಮಿಯಾಮ್ನಾರ್, ಚೈನಾ, ಜೈಪುರ್’ಗಳಲ್ಲಿ ಆದ ದುರಂತದಿಂದ ಇವರಿಗೆ ದಿನಕ್ಕೆ ಇಪ್ಪತ್ತುನಾಲ್ಕು ಘಂಟೆ ಕೆಲಸ.   ಪೂರ್ತಿ ಓದಿ... »



